ಚಾಮರಾಜನಗರ: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಏಟು ಕೊಟ್ಟಿರುವ ಎಸಿಬಿ ಅಧಿಕಾರಿಗಳು ಗುಂಡ್ಲುಪೇಟೆ ಅಬಕಾರಿ ನಿರೀಕ್ಷಕ ಚೆಲುವರಾಜ್ ಮನೆ, ಕಚೇರಿ ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಕಳೆದೊಂದು ವರ್ಷದಿಂದ ಗುಂಡ್ಲುಪೇಟೆಯಲ್ಲಿ ಅಬಕಾರಿ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಚೆಲುವರಾಜ್ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಕಚೇರಿ ಸೇರಿದಂತೆ ಎರಡು ಕಡೆ, ಮೈಸೂರು, ಚನ್ನರಾಯಪಟ್ಟಣ, ಮಂಡ್ಯ ಬೆಂಗಳೂರಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.