ಚಿಕ್ಕಳ್ಳಾಪುರ :ಜಮೀನಿಗೆ ಖಾತೆ ಮಾಡಿಕೊಡಲು ₹12 ಲಕ್ಷಕ್ಕೆ ಬೇಡಿಕೆ ಇಟ್ಟು ₹1 ಲಕ್ಷ ಹಣ ಸ್ವೀಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಹೋಬಳಿ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದ ತಾಲೂಕು ಕಚೇರಿಯಲ್ಲಿ ನಡೆದಿದೆ.
ಜಮೀನು ಖಾತೆ ಮಾಡಿ ಕೊಡಲು ₹12 ಲಕ್ಷ ಡಿಮ್ಯಾಂಡ್.. ಹಣ ಪಡೆಯುವಾಗ ಎಸಿಬಿ ಬಲೆಗೆ ಅಧಿಕಾರಿಗಳು.. - ACB Officers latest news
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿವೈಎಸ್ಪಿ ಗೋಪಾಲ್ ಜೋಗಿ ನೇತೃತ್ವದ ತಂಡ ದಾಳಿ ನಡೆಸಿದ್ದು, ನಗರದ ಹೊರವಲಯದಲ್ಲಿ ನಾರಾಯಣ್ ಎಂಬುವರಿಂದ ಒಂದು ₹1 ಲಕ್ಷ ಸ್ವೀಕರಿಸುವ ವೇಳೆ ಅಧಿಕಾರಿಗಳು ಸಿಕ್ಕಿಬಿದ್ದಾರೆ.
ಶಿಡ್ಲಘಟ್ಟದ ಕಸಬಾ ಹೋಬಳಿ ನಿರೀಕ್ಷಕ ವಿಶ್ವನಾಥ್ ಮತ್ತು ಗ್ರಾಮಲೆಕ್ಕಾಧಿಕಾರಿ ಗೋಕುಲ್ ಹಣ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿಗಳಾಗಿದ್ದಾರೆ. ಮಂಡೂರಿನ ನಾರಾಯಣಮೂರ್ತಿ ಎಂಬುವರು ಶಿಡ್ಲಘಟ್ಟ ತಾಲೂಕಿನಲ್ಲಿ ಜಮೀನು ಖರೀದಿಸಿದ್ದಾರೆ. ಈ ಸಂದರ್ಭದಲ್ಲಿ ಖಾತೆ ಮಾಡಿ ಕೊಡುವಂತೆ ಕೇಳಿದಾಗ ₹12 ಲಕ್ಷಕ್ಕೆ ಬೇಡಿಕೆ ಇಟ್ಟು ₹1 ಲಕ್ಷ ಪಡೆಯುವ ವೇಳೆ ಸಿಕ್ಕಿ ಬಿದ್ದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿವೈಎಸ್ಪಿ ಗೋಪಾಲ್ ಜೋಗಿ ನೇತೃತ್ವದ ತಂಡ ದಾಳಿ ನಡೆಸಿದ್ದು, ನಗರದ ಹೊರವಲಯದಲ್ಲಿ ನಾರಾಯಣ್ ಎಂಬುವರಿಂದ ಒಂದು ₹1 ಲಕ್ಷ ಸ್ವೀಕರಿಸುವ ವೇಳೆ ಅಧಿಕಾರಿಗಳು ಸಿಕ್ಕಿಬಿದ್ದಾರೆ. ಎಸಿಬಿ ಅಧಿಕಾರಿಗಳು ಲಂಚಕೋರರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸುತ್ತಿದ್ದಾರೆ.