ಚಾಮರಾಜನಗರ: ಯೋಧ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ನಗರದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ಚಾಮರಾಜೇಶ್ವರನಿಗೆ ಈಡುಗಾಯಿ ಒಡೆದು ಸಂಭ್ರಮಾಚರಿಸಿದರು.
ಯೋಧ ಅಭಿನಂಧನ್ ರಿಲೀಸ್: ಚಾಮರಾಜನಗರದಲ್ಲಿ ಈಡುಗಾಯಿ ಒಡೆದು ಸಂಭ್ರಮಾಚರಣೆ - Etb Bharat
ಯೋಧ ಅಭಿನಂಧನ್ ಬಿಡುಗಡೆ ಹಿನ್ನಲೆಯಲ್ಲಿ ಚಾಮರಾಜನಗರದಲ್ಲಿ ಚಾಮರಾಜೇಶ್ವರನಿಗೆ ಈಡುಗಾಯಿ ಒಡೆದು ಸಂಭ್ರಮಾಚರಣೆ ನಡೆಸಿದರು.
ಚಾಮರಾಜನಗರದಲ್ಲಿ ಚಾಮರಾಜೇಶ್ವರನಿಗೆ ಈಡುಗಾಯಿ ಒಡೆದು ಸಂಭ್ರಮಾಚರಣೆ
ಕೇವಲ 48 ಗಂಟೆಗಳಲ್ಲಿ ಹೆಮ್ಮೆಯ ಯೋಧ ತಾಯ್ನಾಡಿಗೆ ಹಿಂತಿರುಗಿದ್ದಾರೆ. ಯುದ್ಧ ವಿಮಾನವನ್ನು ಹೊಡೆದುರುಳಿಸಿ ಶತ್ರು ದೇಶಕ್ಕೆ ಸೆರೆಯಾದರೂ ಒಂದು ಮಾಹಿತಿಯನ್ನು ಬಿಟ್ಟುಕೊಡದೆ ಗಂಭೀರತೆಯನ್ನು ಅವರು ಪ್ರದರ್ಶಿಸಿರುವುದು ದೇಶದ ಹೆಮ್ಮೆ ಎಂದ ಕಾರ್ಯಕರ್ತರು, ಘೋಷಣೆಗಳನ್ನು ಕೂಗಿ ಸಂಭ್ರಮಪಟ್ಟರು.
ವಿಂಗ್ ಕಮಾಂಡರ್ ಅಭಿನಂದನ್ ಮತ್ತು ಸೇನೆಗೆ ನಮನಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ಪಾಕ್ ಇನ್ನಾದರೂ ನರಿ ಬುದ್ಧಿ ಬಿಟ್ಟು ಶಾಂತಿಯಿಂದಿರಲಿ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.