ಕೊಳ್ಳೇಗಾಲ: ಕಾವೇರಿ ನದಿಯಲ್ಲಿ (Cauvery River) ಸ್ನಾನ ಮಾಡಲು ತೆರಳಿದ್ದ ನಾಲ್ಕು ಜನ ಯುವಕರ ಪೈಕಿ ಒರ್ವ ಯುವಕ ನೀರು ಪಾಲಾಗಿರುವ ಘಟನೆ ಶಿವನ ಸಮುದ್ರದ ಬಳಿ ನಡೆದಿದೆ.
ನದಿಯಲ್ಲಿ ಸ್ನಾನ ಮಾಡಲು ಹೋಗಿ ಯುವಕ ನೀರು ಪಾಲು: ಪ್ರಕರಣ ದಾಖಲು - Cauvery River Man washed away
ಕಾವೇರಿ ನದಿಯಲ್ಲಿ (Cauvery River) ಸ್ನಾನಕ್ಕೆಂದು ತೆರಳಿದ್ದ ಯುವಕನೊಬ್ಬ ಕಾಲು ಜಾರಿ ಬಿದ್ದು, ನದಿ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ಶಿವನ ಸಮುದ್ರದಲ್ಲಿ ನಡೆದಿದೆ. ಯುವಕ ಕೋಲ್ಕತ್ತಾ ಮೂಲದವನು ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಯುವಕ ನೀರು ಪಾಲು
ಕೋಲ್ಕತ್ತಾ ಮೂಲದ ಮಹಮ್ಮದ್ ಪೈಜ಼ರ್ (21) ಕಾಲು ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿ ಹೋದ ಯುವಕನಾಗಿದ್ದಾನೆ. ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ನಾಲ್ವರ ಸ್ನೇಹಿತರು ಶಿವನ ಸಮುದ್ರದ ಸಮೀಪದ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ, ದರ್ಗಾ ಬಳಿಯ ಕಾವೇರಿ ನದಿಯಲ್ಲಿ ಸ್ನಾನಮಾಡಲು ಹೋಗಿದ್ದಾಗ ಕಾಲು ಜಾರಿ ಬಿದ್ದು, ಮಹಮ್ಮದ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಶೋಧಕ ಕಾರ್ಯ ನಡೆಯಲಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.