ಚಾಮರಾಜನಗರ:ಪ್ರೀತಿ ಮಾಡೋವಾಗ ಜಗವೇ ಕತ್ತಲು ಅಂತಾರೆ. ಅದನ್ನೇ ಈ ಇಬ್ಬರು ಪ್ರೇಮಿಗಳು ಚಾಚೂತಪ್ಪದೇ ಪಾಲಿಸ್ತಿದಾರೇನೋ. ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಾಲಿ ರೈಡ್ ಹೋಗಿದ್ದಾರೆ. ಆದರೆ, ವಿಷ್ಯ ಇದಿಷ್ಟೇ ಅಲ್ಲ. ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲೆ ಎದುರಾಗಿ ಕೂರಿಸಿಕೊಂಡು ರಸ್ತೆ ಮೇಲೆ ಗಾಡಿ ಓಡಿಸಿದ್ದಾನೆ. ಇದು ನೋಡುಗರನ್ನು ಚಕಿತಗೊಳಿಸಿದೆ.
ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್ ಬೈಕ್ನಲ್ಲಿ ಹೊರಟಿದ್ದ ಈ ಜೋಡಿ ಜಗತ್ತನ್ನೇ ಮರೆತು ಪ್ರೇಮಲೋಕದಲ್ಲಿ ಮುಳುಗಿದ್ದರು. ರಸ್ತೆ ಮೇಲೆ ಬಸ್, ಲಾರಿಯಂತಹ ಯಾವುದೇ ವಾಹನ ಬಂದರೂ ಲೆಕ್ಕಿಸದೇ ಇಬ್ಬರೂ ಜಾಲಿಯಾಗಿ ರೈಡ್ ಮಾಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ಇದೆ.