ಚಾಮರಾಜನಗರ: ಸಂಡೇ ಲಾಕ್ಡೌನ್ ವೇಳೆ ಹೊರಗಡೆ ಹರಟೆ ಹೊಡೆಯುತ್ತಿದ್ದ ವ್ಯಕ್ತಿಯೊಬ್ಬ ಪೊಲೀಸರನ್ನು ಕಂಡು ಹೆದರಿ ಓಡುವಾಗ ಮುಗ್ಗರಿಸಿ ಬಿದ್ದು ಮೃತಪಟ್ಟಿರುವ ಘಟನೆ ಕುದೇರು ಠಾಣಾ ವ್ಯಾಪ್ತಿಯ ಎಲಕ್ಕೂರು ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಕಂಡು ಹೆದರಿ ಓಡುವಾಗ ಮುಗ್ಗರಿಸಿ ಬಿದ್ದು ಯುವಕನ ಸಾವು...! - ಚಾಮರಾಜನಗರ ಯುವಕ ಸಾವು
ಸಂಡೇ ಲಾಕ್ಡೌನ್ ವೇಳೆ ಹರಟೆ ಹೊಡೆಯುತ್ತಿದ್ದ ಯುವಕನೊಬ್ಬ ಪೊಲೀಸ್ ಬೀಟ್ ಕಂಡು ಹೆದರಿ ಓಡುವ ಸಂದರ್ಭದಲ್ಲಿ ಮುಗ್ಗರಿಸಿ ಬಿದ್ದು ಮೃತಪಟ್ಟಿರುವ ಘಟನೆ ಎಲಕ್ಕೂರು ಗ್ರಾಮದಲ್ಲಿ ನಡೆದಿದೆ.

ಯುವಕ ಸಾವು
ಶಂಕರ್(24) ಮೃತ ದುರ್ದೈವಿ. ಭಾನುವಾರ ಸಂಜೆ ಗ್ರಾಮದ ಅಂಗನವಾಡಿ ಹತ್ತಿರ ನಾಲ್ಕಾರು ಸ್ನೇಹಿತರು ಮಾತನಾಡುತ್ತ ಕುಳಿತ್ತಿದ್ದ ವೇಳೆ ಲಾಕ್ಡೌನ್ ಬೀಟ್ ನಡೆಸುತ್ತಿದ್ದ ಕುದೇರು ಪೊಲೀಸರ ಜೀಪ್ ಕಂಡು ಓಡಿದ ವೇಳೆ, ಮುಗ್ಗರಿಸಿ ಬಿದ್ದು ಶಂಕರ್ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ನಡುವೆ, ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಜಿಲ್ಲಾಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಘಟನೆ ಕುರಿತು, ಯಾವುದೇ ದೂರಾಗಲಿ- ಪ್ರಕರಣವಾಗಲಿ ದಾಖಲಾಗಿಲ್ಲ.