ಕರ್ನಾಟಕ

karnataka

ETV Bharat / state

ಐದ್‌ ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರೂ ಆಗಿರಲಿಲ್ಲ, ಕೊನೆಗೆ ಮನೆಯೊಳಗೇ ಬೆಂಕಿ ಹಚ್ಕೊಂಡ ಯುವಕ.. - ಅಗ್ನಿಶಾಮಕ ದಳ ಸಿಬ್ಬಂದಿ

ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಾಮರಾಜನಗರ ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ

By

Published : Jun 15, 2019, 11:09 PM IST

Updated : Jun 16, 2019, 12:02 AM IST

ಚಾಮರಾಜನಗರ :ಈ ಹಿಂದೆ ಐದು ಬಾರಿ ಆತ್ಮಹತ್ಯೆ ಯತ್ನಿಸಿ ಬದುಕುಳಿದಿದ್ದ ಶಶಿಕುಮಾರ್​ ಎಂಬಾತ, ಕೊನೆಗೂ ಶುಕ್ರವಾರ ಮನೆಯಲ್ಲಿ ಯಾರಿಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸೇರಿದ್ದ ಜನ

ಈ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ. ರಂಗಪ್ಪಚಾರಿ ಎಂಬುವರ ಮಗ ಶಶಿಕುಮಾರ್ (25) ಮೃತ ದುರ್ದೈವಿ. ಶಶಿಕುಮಾರ್‌ ಮದ್ಯ ವ್ಯಸನಿಯಾಗಿದ್ದ. ಅಲ್ಲದೆ, ಮಾನಸಿಕ ಖಿನ್ನತೆಯಿಂದಲೂ ಬಳಲುತ್ತಿದ್ದ ಎನ್ನಲಾಗಿದೆ. ಈತ ಈ ಹಿಂದೆಯೂ 5 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ. ಬೆಂಕಿ ಹಚ್ಚಿಕೊಂಡ ಬಳಿಕ ಮನೆಗೂ ಬೆಂಕಿ ವ್ಯಾಪಿಸಿ ಮನೆಯೂ ಹೊತ್ತಿ ಉರಿದಿದೆ. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Jun 16, 2019, 12:02 AM IST

ABOUT THE AUTHOR

...view details