ಕರ್ನಾಟಕ

karnataka

ETV Bharat / state

ಚಾಮರಾಜನಗರ ಆಮ್ಲಜನಕ ದುರಂತಕ್ಕೆ ಒಂದು ವರ್ಷ: ಸಂತ್ರಸ್ತರಿಗೆ ಸಿಗದ ನ್ಯಾಯ - ಚಾಮರಾಜನಗರ ಆಮ್ಲಜನಕ ದುರಂತಕ್ಕೆ ಒಂದು ವರ್ಷ

ಮೃತಪಟ್ಟ ಎಲ್ಲ 36 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಇನ್ನೂ ಈಡೇರಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ 36 ಸಂತ್ರಸ್ತ ಕುಟುಂಬಗಳನ್ನೂ ಭೇಟಿ ಮಾಡಿ ತಲಾ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ್ದಾರೆ.

Chamarajanagar Covid Hospital
ಚಾಮರಾಜನಗರ ಕೋವಿಡ್​ ಆಸ್ಪತ್ರೆ

By

Published : May 2, 2022, 1:10 PM IST

ಚಾಮರಾಜನಗರ: ಕೊರೊನಾ‌ ಎರಡನೇ ಅಲೆಯಲ್ಲಿ ಆಮ್ಲಜನಕ ಸಿಗದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಇಂದಿಗೆ ಒಂದು ವರ್ಷವಾಗಿದ್ದರೂ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಅದೇ ರೀತಿ ತಪ್ಪಿತಸ್ಥರ ವಿರುದ್ಧ ಕ್ರಮವೂ ಆಗಿಲ್ಲ‌. 2021ರ ಮೇ 2ರಂದು ಜಿಲ್ಲಾಸ್ಪತ್ರೆಯ ನಿಗಾ ಘಟಕದಲ್ಲಿದ್ದ 34 ಮಂದಿ ಕೋವಿಡ್ ಸೋಂಕಿತರು ಆಮ್ಲಜನಕ ಸಿಗದೇ ಅಸುನೀಗಿದ್ದರು.

ಸರ್ಕಾರದ ಅಂಕಿಅಂಶಗಳಲ್ಲಿ 24 ಮಂದಿ ಮೃತಪಟ್ಟಿದ್ದಾರೆ ಎಂದಿದ್ದು 36 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕರಣದ ತನಿಖೆಗಾಗಿ ಹೈಕೋರ್ಟ್‌ ನೇಮಿಸಿದ್ದ ತನಿಖಾ ಸಮಿತಿ ಹೇಳಿದೆ. ಹೈಕೋರ್ಟ್‌ನ ಸೂಚನೆಯಂತೆ, ಮೃತಪಟ್ಟ 24 ಮಂದಿಯ ಕುಟುಂಬಗಳಿಗೆ ಕಳೆದ ವರ್ಷದ ಜೂನ್‌ ತಿಂಗಳ ಆರಂಭದಲ್ಲಿ ತಲಾ ₹2 ಲಕ್ಷ ಹಾಗೂ ಆಗಸ್ಟ್‌ ಎರಡನೇ ವಾರದಲ್ಲಿ 13 ಮಂದಿಯ ಕುಟುಂಬಗಳಿಗೆ ಹೆಚ್ಚುವರಿಯಾಗಿ ತಲಾ ₹3 ಲಕ್ಷ ಹಣವನ್ನು ತಾತ್ಕಾಲಿಕ ಪರಿಹಾರವಾಗಿ ಜಿಲ್ಲಾಡಳಿತ ವಿತರಿಸಿದೆ.

ಮೇ 2ರ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯ ಅವಧಿಯಲ್ಲಿ ಮೃತಪಟ್ಟ ಕೋವಿಡ್‌ ರೋಗಿಗಳನ್ನು ಮಾತ್ರ ಹೆಚ್ಚುವರಿ ಪರಿಹಾರಕ್ಕೆ ಪರಿಗಣಿಸಲಾಗಿದೆ. ಕೆಲವು ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಮೃತಪಟ್ಟ ಎಲ್ಲ 36 ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಇನ್ನೂ ಈಡೇರಿಲ್ಲ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 36 ಸಂತ್ರಸ್ತ ಕುಟುಂಬಗಳನ್ನೂ ಭೇಟಿ ಮಾಡಿ ತಲಾ ಕುಟುಂಬಕ್ಕೆ 1 ಲಕ್ಷ ರೂ. ವಿತರಿಸಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮವಾಗಿಲ್ಲ:ಆಗಿನ ಡಿಸಿಯಾಗಿದ್ದ ಡಾ.ಎಂ.ಆರ್.ರವಿ ಹಾಗೂ ಡಿಎಚ್ಒ ರವಿ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಹೈಕೋರ್ಟ್ ನೇಮಿಸಿದ್ದ ಸಮಿತಿ ವರದಿ ನೀಡಿತ್ತು‌‌. ಇನ್ನು ಇದರ ವಿಚಾರಣೆ ಹೈ ಕೋರ್ಟ್ ಅಂಗಲದಲ್ಲಿದೆ. ಸರ್ಕಾರ ನೇಮಿಸಿದ್ದ ಏಕಸದಸ್ಯ ಸಮಿತಿಯ ವರದಿ ಇನ್ನೂ ಬಹಿರಂಗವಾಗಿಲ್ಲ. ಸರ್ಕಾರವು ಇದುವರೆಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳದೇ ಇರುವುದು ವಿಪರ್ಯಾಸವೇ ಆಗಿದೆ‌. ಕುಟುಂಬದ ಸದಸ್ಯನನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಇನ್ನೂ ಕೂಡ ಪರಿಹಾರ, ನೆರವಿಗಾಗಿ ಕಚೇರಿಗೇ ಅಲೆಯುತ್ತಲೇ ಇದ್ದು ಸರ್ಕಾರ ಎಂದು ಇವರತ್ತ ನೋಡುವುದು ಕಾದು ನೋಡಬೇಕಿದೆ‌‌.

ಇದನ್ನೂ ಓದಿ:ರಾಜ್ಯದಲ್ಲಿಂದು 104 ಮಂದಿಗೆ ಸೋಂಕು ದೃಢ; ಒಬ್ಬ ಸೋಂಕಿತ ಬಲಿ

ABOUT THE AUTHOR

...view details