ಕರ್ನಾಟಕ

karnataka

ETV Bharat / state

ಕಾಣೆಯಾಗಿದ್ದ ಮಹಿಳೆ ಮಾದಪ್ಪನ ಬೆಟ್ಟದಲ್ಲಿ ನೇಣಿಗೆ ಶರಣು - ಮಹದೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣಾದ ಮಹಿಳೆ

ಮಲೆಮಹದೇಶ್ವರ ಬೆಟ್ಟದಲ್ಲಿನ ಗಿರಿದರ್ಶಿನಿ ಹೋಟೇಲ್ ಸಮೀಪದ ಅರಣ್ಯ ಪ್ರದೇಶದಲ್ಲಿ ಮಹಿಳೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

MM hils

By

Published : Aug 21, 2019, 8:27 PM IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿನ ಗಿರಿದರ್ಶಿನಿ ಹೋಟೇಲ್ ಸಮೀಪದ ಅರಣ್ಯ ಪ್ರದೇಶದಲ್ಲಿ ಮಹಿಳೆಯೋರ್ವರು ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ಗೌರಮ್ಮ(51) ಮೃತ ದುರ್ದೈವಿ.

ನಂಜನಗೂಡಿನಲ್ಲಿ ವಾಸವಿದ್ದ ಮೃತರು ಕೌಟುಂಬಿಕ ಕಲಹದಿಂದ ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಇಂದು ಬೆಳಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details