ಚಾಮರಾಜನಗರ: ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದ ರೈತನ ಮೇಲೆ ಕಾಡುಹಂದಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ.
ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದವನ ಮೇಲೆ ಕಾಡುಹಂದಿ ಹಿಂಡು ದಾಳಿ
ಹಿತ್ತಲಿನಲ್ಲಿ ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದ ವೇಳೆ ಕಾಡುಹಂದಿಗಳ ಹಿಂಡು ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಮಹಾದೇವಪ್ಪರ ಮುಖ, ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ.
ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದವನ ಮೇಲೆ ಕಾಡುಹಂದಿ ಹಿಂಡು ದಾಳಿ
ರೈತ ಮಹಾದೇವಪ್ಪ(62) ಗಂಭೀರವಾಗಿ ಗಾಯಗೊಂಡವರಾಗಿದ್ದು, ಹಿತ್ತಲಿನಲ್ಲಿ ಜಾನುವಾರುಗಳಿಗೆ ಹುಲ್ಲು ಕೀಳುತ್ತಿದ್ದ ವೇಳೆ ಕಾಡುಹಂದಿಗಳ ಹಿಂಡು ಏಕಾಏಕಿ ದಾಳಿ ನಡೆಸಿದೆ. ಘಟನೆಯಲ್ಲಿ ಮಹಾದೇವಪ್ಪರ ಮುಖ, ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಗಾಯವಾಗಿದೆ. ಸದ್ಯ, ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.