ಚಾಮರಾಜನಗರ: ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರದಲ್ಲಿ ನಡೆದಿದೆ. ತ್ರಿವೇಣಿ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯಾಗಿದ್ದು, ವರ್ಷದ ಹಿಂದೆ ಅಂಕಶೆಟ್ಟಿಪುರ ಗ್ರಾಮದ ರಾಜೇಂದ್ರ ಎಂಬಾತನೊಂದಿಗೆ ವಿವಾಹವಾಗಿದ್ದಳು.
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ: ಡೈರಿಯಲ್ಲಿದೆಯಂತೆ ಪತಿಯ ಕ್ರೂರ ಚರಿತ್ರೆ! - Chamarajanagar East Police Station
ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತೀ ದಿನ ಹೇಗೆ ನಡೆದುಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬುದನ್ನು ಇಂಚಿಚು ಡೈರಿಯಲ್ಲಿ ಬರೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದ್ದು, ಪತಿ ರಾಜೇಂದ್ರನ ಮೊಬೈಲ್, ಡೈರಿ ಹಾಗೂ ಅತ್ತೆ-ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೃಹಿಣಿ ಆತ್ಮಹತ್ಯೆ
ವರದಕ್ಷಿಣೆ ವಿಚಾರವಾಗಿ ಪ್ರತಿನಿತ್ಯ ಪತಿ ಸೇರಿದಂತೆ ಕುಟುಂಬಸ್ಥರು ಕಿರುಕುಳು ನೀಡುತ್ತಿದ್ದರು ಎಂದು ಗೋಳು ತೋಡಿಕೊಳ್ಳುತ್ತಿದ್ದಳೆಂದು ಮೃತಳ ಪಾಲಕರು ಚಾಮರಾಜನಗರ ಪೂರ್ವ ಠಾಣೆಗೆ ದೂರು ನೀಡಿದ್ದಾರೆ.
ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತೀ ದಿನ ಹೇಗೆ ನಡೆದುಕೊಳ್ಳುತ್ತಿದ್ದರು, ಹೇಗೆಲ್ಲಾ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬುದನ್ನು ಇಂಚಿಚು ಡೈರಿಯಲ್ಲಿ ಬರೆದುಕೊಂಡಿದ್ದಾಳೆ ಎಂದು ತಿಳಿದು ಬಂದಿದ್ದು, ರಾಜೇಂದ್ರನ ಮೊಬೈಲ್, ಡೈರಿ ಹಾಗೂ ಅತ್ತೆ ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.