ಚಾಮರಾಜನಗರ:ಇಬ್ಬರನ್ನು ಬಲಿ ಪಡೆದ ನರಹಂತಕ ಹುಲಿ ಕಾರ್ಯಾಚರಣೆಯು 3ನೇ ದಿನಕ್ಕೆ ಕಾಲಿಟ್ಟಿದ್ದು, ಹುಂಡಿಪುರ-ಚೌಡಹಳ್ಳಿ ಗ್ರಾಮದ ರೈತರು ಜಮೀನಿಗೆ ತೆರಳದೇ- ಜಾನುವಾರುಗಳನ್ನು ಮೇಯಿಸಲಾಗದೇ ಪಡಿಪಾಟಲು ಪಡುತ್ತಿದ್ದಾರೆ.
ಹುಲಿಯ ಚಲನವಲನ ಅರಿಯಲು ಅಳವಡಿಸಿದ್ದ 200 ಕ್ಯಾಮೆರಾಗಳಲ್ಲೂ ಗುರುವಾರದಿಂದ ಹುಲಿ ಚಿತ್ರ ಸೆರೆಯಾಗದಿರುವುದು ಮತ್ತು ಡ್ರೋನ್ ಕ್ಯಾಮರಾದ ಕಣ್ಣಿಗೂ ಬೀಳದಿರುವುದು ಅರಣ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದೆ.
ಹುಲಿ ಪತ್ತೆಯಾಗದಿರುವುದರಿಂದ ಹುಂಡಿಪುರ, ಚೌಡಹಳ್ಳಿ, ಕೆಬ್ಬೇಪುರ ಗ್ರಾಮದ ಜನರ ಸಹನೆಯ ಕಟ್ಟೆಯೂ ಒಡೆಯುತ್ತಿದ್ದು ಅರಣ್ಯ ಇಲಾಖೆ ಮೇಲೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಹುಲಿಗೆ ವಯಸ್ಸಾಗಿಲ್ಲ ಪೆಟ್ಟು ಕೂಡ ಆಗದೇ ದಷ್ಟಪುಷ್ಟವಾಗಿದ್ದು ನರಭಕ್ಷಕನಲ್ಲ ಎಂಬ ಇಲಾಖೆಯ ವಾದದ ವಿರುದ್ಧ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.