ಚಾಮರಾಜನಗರ :ಆಹಾರ ಅರಸಿ ನಾಡಿಗೆ ಲಗ್ಗೆಯಿಟ್ಟಿದ್ದ ಜೋಡಿ ಆನೆಗಳು ಜನರ ಕೂಗಾಟಕ್ಕೆ ಬೆದರಿ ಓಡಿದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವ ಘಟನೆ ಗಡಿಭಾಗವಾದ ತಮಿಳುನಾಡಿನ ಕರಳವಾಡಿ ಗ್ರಾಮದಲ್ಲಿ ನಡೆದಿದೆ.
ಗಡಿಭಾಗದಲ್ಲಿ ಉಪಟಳ ನೀಡಿ ಪ್ರಾಣ ತೆತ್ತ ಜೋಡಿ ಆನೆಗಳು.. - Chamarajanagar elephants died'
ಜಮೀನೊಂದಕ್ಕೆ ನುಗ್ಗಿದ್ದ ಆನೆಯನ್ನು ಬೆದರಿಸಿ ಕಾಡಿಗಟ್ಟುವಾಗ ಕರಪ್ಪುಸ್ವಾಮಿ ಎಂಬುವರ ಕಬ್ಬಿನ ಜಮೀನಿನಲ್ಲಿ ಹಾಯಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಎರಡೂ ಆನೆಗಳು ಮೃತಪಟ್ಟಿವೆ.
ಗಡಿಭಾಗದಲ್ಲಿ ಉಪಟಳ ನೀಡಿ ಪ್ರಾಣ ತೆತ್ತ ಜೋಡಿ ಆನೆಗಳು... !
ಜಮೀನೊಂದಕ್ಕೆ ನುಗ್ಗಿದ್ದ ಆನೆಯನ್ನು ಬೆದರಿಸಿ ಕಾಡಿಗಟ್ಟುವಾಗ ಕರಪ್ಪುಸ್ವಾಮಿ ಎಂಬುವರ ಕಬ್ಬಿನ ಜಮೀನಿನಲ್ಲಿ ಹಾಯಿಸಿದ್ದ ಅಕ್ರಮ ವಿದ್ಯುತ್ ಪ್ರವಹಿಸಿ ಎರಡೂ ಆನೆಗಳು ಮೃತಪಟ್ಟಿವೆ.
ಈ ಆನೆಗಳು ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬಂದಿದ್ದ ಗಂಡು ಹಾಗೂ ಹೆಣ್ಣು ಜೋಡಿ ಆನೆಗಳೆರಡು 30-40ರ ವಯೋಮಾನದವು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ತಮಿಳುನಾಡಿನ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.