ಚಾಮರಾಜನಗರ: ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ 9 ತಿಂಗಳ ಶಿಶು ತೀವ್ರ ಅಸ್ವಸ್ಥವಾಗಿ ಮೃತಪಟ್ಟಿದೆ ಎಂದು ಆರೋಪಿಸಿ ಕುಟುಂಬಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ, ಅಶ್ವಥ್ ದಂಪತಿಯ 9 ತಿಂಗಳ ಶಿಶು ಮೃತಪಟ್ಟಿದೆ. ಜ್ವರ, ಕೆಮ್ಮು ಇದ್ದ ಕಾರಣ ಇಂದು ಬೆಳಗ್ಗೆ ಮಗುವನ್ನು ಆಸ್ಪತ್ರೆಗೆ ಕರೆತಂದ ವೇಳೆ ದಾದಿಯರು ವಾರ್ಡಿಗೆ ಕರೆದೊಯ್ದು ಎರಡು-ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಬಳಿಕ, ಶಿಶು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಮೈಸೂರಿಗೆ ಕರೆದೊಯ್ಯುವಂತೆ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಆಂಬ್ಯುಲೆನ್ಸ್ಗೆ ಸಾಗಿಸುವಾಗ ಮಗು ಮೃತಪಟ್ಟಿದೆಯಂತೆ.