ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಸ್ವಾಭಿಮಾನ; 20 ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ - ಇಂದು ಅಂತ್ಯ ಸಂಸ್ಕಾರ!

ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು ಮೂವರು ಪುತ್ರರಿದ್ದಾರೆ‌‌. ತಮ್ಮ ತಿಥಿಯನ್ನು ಅವರ ಹಣದಲ್ಲೇ ಮಾಡಬೇಕು ಎಂಬ ಸ್ವಾಭಿಮಾನದಿಂದಾಗಿ ಈ ಕೆಲಸ ಮಾಡಿದ್ದಾರೆ.

20  ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ, ಇಂದು ಅಂತ್ಯ ಸಂಸ್ಕಾರ!
20 ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ, ಇಂದು ಅಂತ್ಯ ಸಂಸ್ಕಾರ!

By

Published : Jul 25, 2022, 3:17 PM IST

ಚಾಮರಾಜನಗರ: ವ್ಯಕ್ತಿ ಮೃತಪಟ್ಟ ಬಳಿಕ ಸಮಾಧಿ ನಿರ್ಮಾಣ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಾವು ಯಾರಿಗೂ ತೊಂದರೆ ಕೊಡಬಾರದು, ತಾವು ದುಡಿದ ಹಣದಲ್ಲೇ ತನ್ನ ಅಂತಿಮ ವಿಧಿ - ವಿಧಾನ ನೆರವೇರಬೇಕು ಎಂದು ಇಚ್ಚಿಸಿ 20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದು, ಅಲ್ಲೇ ಇಂದು ಅಂತಿಮ ವಿಧಿ ವಿಧಾನ ನೆರವೇರುತ್ತಿದೆ.

ಹೌದು.., ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟನಂಜಪ್ಪ(85) ಎಂಬವರು ಇಂದು ದೈವಾಧೀನರಾಗಿದ್ದು, ಇವರು 20 ವರ್ಷಗಳ ಹಿಂದೆಯೇ ತಮ್ಮ ಜಮೀನಿನಲ್ಲಿ ತಾವೇ ಕುಳಿತು ಅಳತೆ ಮಾಡಿ ಗೋಪುರ ಶೈಲಿಯ ಸಮಾಧಿಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಜೊತೆಗೆ, ಅಂತ್ಯ ಸಂಸ್ಕಾರಕ್ಕೆ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ಹಣವನ್ನೂ ಎತ್ತಿಟ್ಟಿದ್ದು ಆ ಹಣದಲ್ಲೇ ಅಂತ್ಯಕ್ರಿಯೆ ನೆರವೇರುತ್ತಿದೆ.

ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು ಮೂರು ಪುತ್ರರಿದ್ದಾರೆ‌‌. ತಮ್ಮ ತಿಥಿಯನ್ನು ತಾವೇ ತಮ್ಮ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಹಾಗೂ ಹಣ ಎತ್ತಿಟ್ಟಿದ್ದರು‌ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

20 ವರ್ಷದ ಮುಂಚಿತವಾಗಿ ಸಮಾಧಿ ನಿರ್ಮಾಣ, ಇಂದು ಅಂತ್ಯ ಸಂಸ್ಕಾರ!

ಪತ್ನಿ ಪಕ್ಕವೇ ಸಮಾಧಿ: ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೊನಾದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು‌. ಅಂತ್ಯ ಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು. ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ಭಾನುವಾರ ಸಂಜೆ ತಂದೆಯವರು ಅಸುನೀಗಿದ್ದು, ಇಂದು ಅವರು ನಿರ್ಮಿಸಿಕೊಂಡ ಸಮಾಧಿಯಲ್ಲೇ, ಅವರು ಎತ್ತಿಟ್ಟಿದ್ದ ಹಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ ಎಂದು ಪುತ್ರ ಗೌಡಿಕೆ ನಾಗೇಶ್ ಹೇಳಿದ್ದಾರೆ.

ಇದನ್ನೂ ಓದಿ: ನೇತ್ರಾವತಿ ಸೇತುವೆ ಹೊಂಡಕ್ಕೆ ಬಿದ್ದು ಕೈಮೂಳೆ ಮುರಿತ: ಪರೀಕ್ಷೆ ಬರೆಯಲಾಗದ ಸ್ಥಿತಿಯಲ್ಲಿ ಎಂಎಸ್ಸಿ ವಿದ್ಯಾರ್ಥಿನಿ

ABOUT THE AUTHOR

...view details