ಚಾಮರಾಜನಗರ:ಕ್ಷುಲ್ಲಕ ಕಾರಣಕ್ಕೆ ಇಬ್ಬರು ಸ್ನೇಹಿತರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹನೂರು ತಾಲೂಕಿನ ದೊಮ್ಮನಗದ್ದೆ ಎಂಬಲ್ಲಿ ನಡೆದಿದೆ. ಕೃಷ್ಣನಾಯ್ಕ(55) ಮೃತ ದುರ್ದೈವಿ.
'ಬಾಟಲಿ ದೋಸ್ತಿ'ಗಳ ನಡುವೆ ಊಟದ ಹೊತ್ತಲ್ಲಿ ಗಲಾಟೆ ಕೊಲೆಯಲ್ಲಿ ಅಂತ್ಯ - ಊಟದ ಸಮಯದಲ್ಲಿ ನಡೆದ ಗಲಾಟೆಗೆ ಓರ್ವ ಬಲಿ
ಕುಡಿದ ಮತ್ತಿನಲ್ಲಿ ನೆರೆಹೊರೆಯ ಸ್ನೇಹಿತರ ನಡುವೆ ಊಟದ ಸಮಯದಲ್ಲಿ ನಡೆದ ಗಲಾಟೆಯಾಗಿ ಒಬ್ಬನ ಸಾವಿನ ಹಂತಕ್ಕೆ ತಲುಪಿರುವ ಘಟನೆ ಹನೂರು ತಾಲೂಕಿನ ದೊಮ್ಮನಗದ್ದೆ ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯ ನೆರೆಮನೆಯಾತ ಹಾಗೂ ರಂಗಪ್ಪ (40) ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳು. ಇವರಿಬ್ಬರು ನೆರೆ ಮನೆಯವರಾಗಿದ್ದು ನಿತ್ಯ ಒಟ್ಟಿಗೆ ಕುಳಿತು ಕುಡಿದು ಮನೆಗೆ ಹಿಂತಿರುಗುವ ಬಾಟಲಿ ದೋಸ್ತಿಗಳಾಗಿದ್ದರು. ನಿನ್ನೆ ತಡರಾತ್ರಿ ಊಟ ಮಾಡುವಾಗ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕುಡಿದ ಮತ್ತಿನಲ್ಲಿ ಕೃಷ್ಣನಾಯಕನ ತಲೆಗೆ ಕೊಡಲಿಯಿಂದ ಹೊಡೆದು ಕೊಂದಿದ್ದಾನೆ ಎನ್ನಲಾಗಿದೆ.
ಸದ್ಯ, ರಾಮಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೃಷ್ಣನಾಯಕನ ಶವವಿದ್ದು ಆರೋಪಿ ರಂಗಪ್ಪ ಪರಾರಿಯಾಗಿದ್ದಾನೆ. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಕುರಿತಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.