ಕರ್ನಾಟಕ

karnataka

ETV Bharat / state

ಆಯತಪ್ಪಿ ಬಿದ್ದ ಬೈಕ್ ಸವಾರನ ಮೇಲೆ ಹರಿದ ಲಾರಿ: ವ್ಯಕ್ತಿ ಮೃತ - ಕೊಳ್ಳೇಗಾಲದಲ್ಲಿ ಅಪಘಾತವಾಗಿ ವ್ಯಕ್ತಿ ಸಾವು

ಕೆಲಸದ ನಿಮಿತ್ತ ಬೈಕ್​ ಸವಾರ ಮಧುವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಹರಡಿದ್ದ ಮರಳಿನಿಂದಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ‌‌. ಹಿಂದಿನಿಂದ ಬರುತ್ತಿದ್ದ ಮಿನಿ ಲಾರಿಯೊಂದು ನಿಯಂತ್ರಿಸಲಾಗದೇ ಬೈಕ್ ಸವಾರನ ಮೇಲೆ ಹರಿದಿದೆ.

ಆಯತಪ್ಪಿ ಬಿದ್ದ ಬೈಕ್ ಸವಾರನ ಮೇಲೆ ಹರಿದ ಲಾರಿ: ವ್ಯಕ್ತಿ ಮೃತ
ಆಯತಪ್ಪಿ ಬಿದ್ದ ಬೈಕ್ ಸವಾರನ ಮೇಲೆ ಹರಿದ ಲಾರಿ: ವ್ಯಕ್ತಿ ಮೃತ

By

Published : Jan 22, 2022, 2:58 AM IST

ಕೊಳ್ಳೇಗಾಲ: ಆಯತಪ್ಪಿ ಬಿದ್ದ ಬೈಕ್ ಸವಾರನ ಮೇಲೆ ಮಿನಿ ಲಾರಿಯೊಂದು ಹರಿದು ಸವಾರ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.

ಕೊಳ್ಳೇಗಾಲದ ಪಟ್ಟಣದ ಗಣೇಶ್(45) ಮೃತ ದುರ್ದೈವಿ. ಕೆಲಸದ ನಿಮಿತ್ತ ಮಧುವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ವೇಳೆ ರಸ್ತೆಯಲ್ಲಿ ಹರಡಿದ್ದ ಮರಳಿನಿಂದಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ‌‌. ಹಿಂದಿನಿಂದ ಬರುತ್ತಿದ್ದ ಮಂಜುನಾಥ ಟ್ರಾವೆಲ್ಸ್ ನ ಮಿನಿ ಲಾರಿಯೊಂದು ನಿಯಂತ್ರಿಸಲಾಗದೇ ಬೈಕ್ ಸವಾರನ ಮೇಲೆ ಹರಿದಿದ್ದರಿಂದ ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಲಾರಿ ಚಾಲಕ ಪರಾರಿಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details