ಚಾಮರಾಜನಗರ:ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.
ಸೌದೆ ತರಲು ಹೋದವ ಕಾಡಾನೆ ದಾಳಿಗೆ ಬಲಿ - ಗುಂಡ್ಲುಪೇಟೆ ಆನೆ ದಾಳಿ ನ್ಯೂಸ್
ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.
![ಸೌದೆ ತರಲು ಹೋದವ ಕಾಡಾನೆ ದಾಳಿಗೆ ಬಲಿ](https://etvbharatimages.akamaized.net/etvbharat/prod-images/768-512-5098086-thumbnail-3x2-hjygyhhjg.jpg)
ಸೌದೆ ಕಡಿಯಲು ಹೋದವನು ಕಾಡಾನೆಗೆ ಬಲಿ
ಗ್ರಾಮದ ರಂಗರಾಜು(65) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೌದೆ ತರಲು ಹೋಗಿ ಬರುತ್ತೇನೆಂದು ಹೋದವರು ಸಂಜೆಯಾದರು ಬಂದಿರಲಿಲ್ಲ. ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಪ್ರತಿನಿತ್ಯ ಗ್ರಾಮದ ಬಳಿ ಕಾಡಾನೆಗಳು ಬರುತ್ತದೆ. ಆದರೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆನೆಗಳು ಗೀಳಿಡುತ್ತಿದ್ದವು, ಇಷ್ಟು ದಿನ ಆನೆಗಳು ಬಂದರೂ ಈ ರೀತಿಯಲ್ಲಿ ಶಬ್ಧ ಮಾಡುತ್ತಿರಲಿಲ್ಲ. ಈ ಹಿನ್ನೆಲೆ ಬೆಳಗ್ಗೆ ಸ್ಥಳ ಪರಿಶೀಲಿಸಿದಾಗ ರಂಗರಾಜು ಮೃತಪಟ್ಟಿರುವುದು ತಿಳಿದು ಬಂದಿದೆ.ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.