ಚಾಮರಾಜನಗರ:ರಸ್ತೆಬದಿ ಬಿದ್ದು ನರಳಾಡುತ್ತಿದ್ದ ಆನೆಯನ್ನು ಮಲೆಮಹದೇಶ್ವರ ವನ್ಯಜೀವಿ ಧಾಮದ ಸಿಬ್ಬಂದಿ ಜೆಸಿಬಿ ಮೂಲಕ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ರಸ್ತೆಬದಿ ಬಿದ್ದು ಒದ್ದಾಡುತ್ತಿದ್ದ ಆನೆ ರಕ್ಷಿಸಿದ ಅರಣ್ಯ ಸಿಬ್ಬಂದಿ - ಆನೆ ರಕ್ಷಣೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಕಣಿವೆ ಸಮೀಪದಲ್ಲಿ ಬಿದ್ದು ಒದ್ದಾಡುತ್ತಿದ್ದ ಆನೆಯನ್ನು ಮಲೆಮಹದೇಶ್ವರ ವನ್ಯಜೀವಿ ಧಾಮದ ಸಿಬ್ಬಂದಿ ಜೆಸಿಬಿ ಮೂಲಕ ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಹನೂರು ತಾಲೂಕಿನ ಅಜ್ಜಿಪುರ ಕಣಿವೆ ಸಮೀಪದಲ್ಲಿ ಆನೆ ಬಿದ್ದು ಒದ್ದಾಡುತ್ತಿರುವುದಾಗಿ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಜೆಸಿಬಿ ಸಹಾಯದಿಂದ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಆನೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದು, ಆನೆ ಕಾಡಿನತ್ತ ತೆರಳಿದೆ.
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಡಿಎಫ್ಒ ಏಡುಕುಂಡಲು, ಆನೆಗೆ ಅಂದಾಜು 30-35 ವರ್ಷ ವಯಸ್ಸಾಗಿದೆ. ಮೇಲ್ನೋಟಕ್ಕೆ ಆರೋಗ್ಯವಾಗಿರುವುದಾಗಿ ಕಂಡುಬಂದರೂ ಬಸವದೊಡ್ಡಿ ಗಸ್ತಿನ ಐವರು ಸಿಬ್ಬಂದಿಗೆ ಆನೆಯ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಆನೆಗೆ ಆರೋಗ್ಯ ಸಮಸ್ಯೆ ಇರುವುದು ಕಂಡುಬಂದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.