ಕರ್ನಾಟಕ

karnataka

ETV Bharat / state

ನೊಗ, ಉಳುಮೆ, ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್​; ಮದುವೆಗೆ ರೈತನ ಕರೆಯೋಲೆ - ವಿಡಿಯೋ - a farmer pre wedding photo shoot

ಚಾಮರಾಜನಗರದಲ್ಲಿ ರೈತನೊಬ್ಬ ತನ್ನ ಕೃಷಿ ಜೀವನವದ ರೀತಿಯಲ್ಲಿಯೇ ಪ್ರೀ ವೆಡ್ಡಿಂಗ್​ ಶೂಟ್ ಮಾಡಿಸಿ ಆಮಂತ್ರಿಸಿದ್ದಾರೆ.

farmer pre wedding photo shoot
ರೈತನ ಪ್ರೀ ವೆಡ್ಡಿಂಗ್ ಶೂಟ್​

By ETV Bharat Karnataka Team

Published : Nov 21, 2023, 1:02 PM IST

Updated : Nov 21, 2023, 3:45 PM IST

ನೊಗ, ಉಳುಮೆ, ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್​; ಮದುವೆಗೆ ಆಹ್ವಾನಿಸಿದ ರೈತ - ವಿಡಿಯೋ

ಚಾಮರಾಜನಗರ:ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಸಾಮಾನ್ಯವಾಗುತ್ತಿದೆ. ಜೋಡಿಗಳು ಮ್ಯಾಚಿಂಗ್​-ಮ್ಯಾಚಿಂಗ್​ ವರ್ಣರಂಜಿತ ಉಡುಗೆ ತೊಟ್ಟು ಬೀಚ್​ನಲ್ಲಿಯೋ, ಪಾರ್ಕ್​ನಲ್ಲಿ ಫೋಟೋ ಶೂಟ್​, ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ. ಆದರೆ ಇಲ್ಲೊಂದು ಜೋಡಿ ಅವರೆಲ್ಲರನ್ನು ಮೀರಿಸುವಂತೆ ಹಳ್ಳಿ ಸ್ಟೈಲ್​ನಲ್ಲಿ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾನೆ.

ಹೌದು, ಈ ರೈತ ಕೃಷಿ ಜೀವನವದ ಮೂಲಕವೇ ತನ್ನ ಮದುವೆಗೆ ಆಹ್ವಾನಿಸಿರುವುದು ಸದ್ಯ ಎಲ್ಲರ ಮೆಚ್ಚುಗೆ ಪಡೆದಿದೆ. ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಚನ್ನಪಟ್ಟಣದ ಕೃತಿಕಾ ಎಂಬವರೊಟ್ಟಿಗೆ ಬುಧವಾರ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದು, ಇವರು ನಡೆಸಿರುವ ಪ್ರೀ ವೆಡ್ಡಿಂಗ್​ ವಿಡಿಯೋ ವೈರಲ್​ ಆಗುತ್ತಿದೆ.

ನೊಗ, ಉಳುಮೆ, ಮುದ್ದೆ-ಉಪ್ಸಾರಿನ ಪ್ರೀ ವೆಡ್ಡಿಂಗ್ ಶೂಟ್​; ಮದುವೆಗೆ ರೈತನ ಕರೆಯೋಲೆ - ವಿಡಿಯೋ

ವಿಭಿನ್ನ‌ ಶೂಟಿಂಗ್ ಏಕೆ: ಈ ಸಂಬಂಧ ಈಟಿವಿ ಭಾರತದ ಜೊತೆ ರೈತ ಮದುಮಗ ಅಭಿಲಾಶ್ ಮಾತನಾಡಿ, ನನಗೆ ಮೊದಲಿನಿಂದಲೂ ಕೃಷಿ ಮೇಲೆ ಆಸಕ್ತಿ, ನನ್ನ ತಂದೆ ಅಪರೂಪದ ಭತ್ತದ ತಳಿಯನ್ನು ಕಾಪಾಡಿದ್ದಾರೆ‌. ಬಿಡಿಗಾಸು ಸಂಬಳಕ್ಕೆ ಖಾಸಗಿ ಕಂಪನಿ ಮೊರೆ ಹೋಗದೆ ಕೃಷಿಯಲ್ಲೇ ಆಕರ್ಷಕವಾಗಿ ಬದುಕಬಹುದು ಎಂಬುದು ನನ್ನ ನಿಲುವು. ನನ್ನನ್ನು ಮದುವೆಯಾಗುತ್ತಿರುವ ಹುಡುಗಿ ಮನೆಯವರು ವ್ಯಾಪಾರಸ್ಥರು. ನಾನು ರೈತ, ಕೃಷಿಯನ್ನೇ ನಂಬಿ ಜೀವನ ಮಾಡುವುದು. ಇದೆಲ್ಲಾ ತಿಳಿಸಿದ ನಂತರವೇ ಮದುವೆ ಆಗುತ್ತಿರುವುದು, ರೈತ ಇಲ್ಲದಿದ್ದರೇ ಜಗವೇ ಇಲ್ಲಾ, ರೈತರು ಕ್ರಿಯಾಶೀಲರಾದರೇ ಬಹುರಾಷ್ಟ್ರೀಯ ಸಂಬಳಕ್ಕಿಂತ ಅಧಿಕ ಹಣ ಸಂಪಾದಿಸಬಹುದು ಎಂದು ತಿಳಿಸಿದರು.

ಡ್ರೋನ್​ ಮೂಲಕ, ಜಲಪಾತ, ಸೇತುವೆ, ನದಿ, ಪಾರಂಪರಿಕ ತಾಣಗಳ ಮುಂದೆ ಪ್ರೀ ವೆಡ್ಡಿಂಗ್ ಶೂಟ್ ನಡೆಸುವವರೇ ಬಹಳ. ಆದರೆ, ಅಭಿಲಾಶ್ ತಾವು ಪ್ರೀತಿಸುವ ಕೃಷಿ ಕಾಯಕವನ್ನೇ ಫೋಟೋಶೂಟ್​ ಮೂಲಕ ತೋರಿಸಿದ್ದಾರೆ. ನೊಗ ಕಟ್ಟಿ ಉಳುಮೆ ಮಾಡುವುದು, ಮಧ್ಯಾಹ್ನದ ಊಟ ಮುದ್ದೆ-ಉಪ್ಸಾರು, ಎತ್ತಿನಗಾಡಿಯಲ್ಲಿ ಭಾವಿ ಪತ್ನಿ ಜೊತೆ ಸವಾರಿ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ಇವರ ಮದುವೆ ದಿನ ಕೃಷಿ ಸಂಬಂಧದ ಉಪನ್ಯಾಸವೂ ಇರಲಿದೆ.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೆಚ್ಚುಗೆ

ರೈತಸಂಘದ ನಾಯಕ ಸಂತಸ:ರೈತ ಚಳವಳಿಯಲ್ಲಿ ಬೆಳೆದ ರೇಚಣ್ಣ ಅವರ ಪುತ್ರ ಅಭಿಲಾಷ್​ಗೆ ಬಾಲ್ಯದಿಂದಲೇ ಚಳವಳಿಯ ವಿಚಾರ ಪ್ರಭಾವ ಬೀರಿದೆ. ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅವರ ಜೀವನ ಸುಖಕರವಾಗಿರಲಿ. ರೈತರ ಮಕ್ಕಳಿಗೆ 45 ವರ್ಷವಾದರೂ ಕನ್ಯೆ ಸಿಗುತ್ತಿಲ್ಲ. ತುಂಬಾ ಸಾಂಸ್ಕೃತಿಕವಾಗಿ ಮದುವೆ ಆಗುತ್ತಿರುವುದು ಒಳ್ಳೆಯ ಮಾದರಿಯಾಗಿದೆ. ಕೃಷಿ ಲಾಭದಾಯಕವಾಗಿ ಮಾಡದ ತನಕ ಈ ವಿವಾಹ ಸಮಸ್ಯೆ ಇದ್ದೇ ಇರಲಿದೆ. ರೈತರ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎಂದು ನಿರಾಶರಾದವರಿಗೆ ಅಭಿಲಾಷ್ ನಡೆ ಮಾದರಿ ಆಗಿದೆ. ಯಾರೂ ಧೃತಿಗೆಡಬೇಡಿ ಅಂತ ಸಾರಿದ್ದಾರೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರತದಲ್ಲಿ ಪ್ರಿ ವೆಡ್ಡಿಂಗ್​ ಶೂಟ್​ಗೆ ಸ್ಥಳ ಹುಡುಕುತ್ತಿದ್ರೆ, ಇಲ್ಲಿವೆ ನೋಡಿ ರಮಣೀಯ ತಾಣಗಳು

Last Updated : Nov 21, 2023, 3:45 PM IST

ABOUT THE AUTHOR

...view details