ಕರ್ನಾಟಕ

karnataka

‘ರೈತರೊಂದಿಗೆ ಒಂದು ದಿನ’: ಗುಂಡ್ಲುಪೇಟೆ ರೈತನ ಜಮೀನಿನಲ್ಲಿ ಬಿ.ಸಿ.ಪಾಟೀಲ್​​​

‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಹಿನ್ನೆಲೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ರೈತನ ಜಮೀನಿಗೆ ತೆರಳಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೃಷಿ ಕುರಿತು ಮಾಹಿತಿ ಪಡೆದಿದ್ದಾರೆ.

By

Published : Jan 23, 2021, 6:39 PM IST

Published : Jan 23, 2021, 6:39 PM IST

A Day with Farmers: BC Patil spent a day in Farmers  Land
‘ರೈತರೊಂದಿಗೆ ಒಂದು ದಿನ’: ಗುಂಡ್ಲುಪೇಟೆ ರೈತನ ಜಮೀನಿನಲ್ಲಿ ದಿನಕಳೆದ ಬಿ.ಸಿ ಪಾಟೀಲ್

ಚಾಮರಾಜನಗರ:ಕೃಷಿಸಚಿವ ಬಿ.ಸಿ.ಪಾಟೀಲ್ ನೇತೃತ್ವದಲ್ಲಿರೈತರೊಂದಿಗೆ ಒಂದು ದಿನ’ ಕಾರ್ಯಕ್ರಮವನ್ನು ಇಂದು ಗುಂಡ್ಲುಪೇಟೆ ತಾಲೂಕಿನ‌ ಮುಂಟಿಪುರದ ರಾಜಶೇಖರ್ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ರೈತರ ಜಮೀನಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಮೊದಲಿಗೆ ರಾಶಿ ಪೂಜೆ ಮಾಡಿ ಧಾನ್ಯ ತುಂಬಿ, ಬಳಿಕ ಮಜ್ಜಿಗೆ ಕಡೆದು ಗಮನ ಸೆಳೆದರು. 35 ಎಕರೆಯಷ್ಟು ಜಮೀನಿನಲ್ಲಿ ಬೆಳೆದಿದ್ದ ಬಾಳೆ, ಈರುಳ್ಳಿ, ಕಲ್ಲಂಗಡಿ, ಅಲಸಂದೆ, ಬೀಟ್​​ರೂಟ್, ತೆಂಗು ಬೆಳೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.

ಗುಂಡ್ಲುಪೇಟೆ ರೈತನ ಜಮೀನಿನಲ್ಲಿ ಬಿ.ಸಿ.ಪಾಟೀಲ್

ಇದಾದ ಬಳಿಕ ಟ್ರ್ಯಾಕ್ಟರ್​​ನಲ್ಲಿ ಉಳುಮೆ, ತೆಂಗಿನ ಗರಿಗಳನ್ನು ಕತ್ತರಿಸಿದ್ದು, ಕೃಷಿ ಹೊಂಡಕ್ಕೆ ಮೀನುಮರಿಗಳನ್ನು ಬಿಟ್ಟು, ಹಸುಗಳಿಗೆ ಯಂತ್ರದ ಸಹಾಯದಿಂದ ಜೋಳದ ಕಡ್ಡಿಗಳನ್ನು ಕತ್ತರಿಸುವ ಮೂಲಕ ಕೃಷಿ ಕುರಿತು ಮಾಹಿತಿ ಪಡೆದರು.

ಈ ವೇಳೆ ಜಿಲ್ಲಾ ಬಿಜೆಪಿ ಮುಖಂಡರು, ಶಾಸಕ ನಿರಂಜನಕುಮಾರ್, ಡಿಸಿ ಡಾ. ಎಂ.ಆರ್.ರವಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ರ್ಯಾಲಿಗೆ ತೆರಳುತ್ತಿದ್ದ ಟ್ರಾಕ್ಟರ್​ ತಡೆದ ಪೊಲೀಸರು : ರೈತರ ಪ್ರತಿಭಟನೆ

ABOUT THE AUTHOR

...view details