ಚಾಮರಾಜನಗರ:ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್ಪೋಸ್ಟ್ನಲ್ಲಿ ನಡೆದಿದೆ.
'ಎಲ್ಲೆ' ಮೀರದ ಪ್ರೇಮ... ಗಡಿ ದಾಟದೆ ಚೆಕ್ಪೋಸ್ಟ್ನಲ್ಲೇ ಮದುವೆಯಾದ ತಮಿಳ್ಗನ್ನಡ ಜೋಡಿ - ಬಾರ್ಡರ್ನಲ್ಲೇ ಮದುವೆಯಾದ ಜೋಡಿ
ಕರ್ನಾಟಕದ ಮತ್ತು ತಮಿಳುನಾಡು ರಾಜ್ಯಗಳ ಜೋಡಿಯೊಂದು ಅಂತರರಾಜ್ಯ ಗಡಿದಾಟದೆ ಪುಣಜನೂರು ಚೆಕ್ಪೋಸ್ಟ್ನ ಬಾರ್ಡರ್ನಲ್ಲೇ ಮದುವೆಯಾಗಿದ್ದಾರೆ. ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ತೆರಳಿದ್ದಾರೆ.
ಅಂತರರಾಜ್ಯಕ್ಕೆ ತೆರಳದೆ ಬಾರ್ಡರ್ನಲ್ಲೇ ಮದುವೆಯಾದ ಜೋಡಿ..!
ಅಂತರ್ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ರಾಜ್ಯದ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು-ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ, ಪುಣಜನೂರು ಚೆಕ್ಪೋಸ್ಟ್ನ ಗಣೇಶ ಗುಡಿಯಲ್ಲೇ ವಿವಾಹವಾಗಿದ್ದಾರೆ.
ವಿವಾಹವಾದ ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ಮರಳಿದ್ದಾರೆ. ಈ ಮದುವೆಗೆ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾಕ್ಷಿಯಾದರು.
Last Updated : May 21, 2020, 10:08 AM IST