ಚಾಮರಾಜನಗರ: ಯುಗಾದಿಯ ಬಣ್ಣದಾಟ ಆಡಿ ಬಣ್ಣ ತೊಳೆದುಕೊಳ್ಳಲು ಈಜಲು ಹೋದ ವೇಳೆ ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಕೆರೆಯಲ್ಲಿ ನಡೆದಿದೆ.
ಯುಗಾದಿಯ ಬಣ್ಣದಾಟ ಆಡಿ ಈಜಲು ಹೋದ ವಿದ್ಯಾರ್ಥಿ ನೀರುಪಾಲು - ಚಾಮರಾಜನಗರ ಸುದ್ದಿ
ಯುಗಾದಿ ಹೊಸ ವರ್ಷದ ಸಂಭ್ರಮದಲ್ಲಿ ಬಣ್ಣದಾಟ ಆಡಿ ತೊಳೆದುಕೊಳ್ಳಲು ಹೋದ ಸಂದರ್ಭದಲ್ಲಿ ಆಳವಾದ ನೀರಿನಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಕೆರೆಯಲ್ಲಿ ನಡೆದಿದೆ.

ಚಾಮರಾಜನಗರ
ಈಜಲು ಹೋದ ವಿದ್ಯಾರ್ಥಿ ನೀರುಪಾಲು
ಕೊಡಸೋಗೆ ಗ್ರಾಮದ ಮಹೇಶ್ ಎಂಬುವರ ಮಗ ಚಂದು ಮೃತ ದುರ್ದೈವಿ. ಈತ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಯುಗಾದಿ ಹೊಸ ವರ್ಷದ ಪ್ರಯುಕ್ತ ಬಣ್ಣ ಎರಚಾಡಿಕೊಂಡು ಸಂಭ್ರಮಿಸಿದ ಚಂದು ಬಳಿಕ ಬಣ್ಣ ತೊಳೆಯಲು ಮೂವರು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾನೆ. ಈ ಸಂದರ್ಭ ಚಂದು ಕಾಲು ಜಾರಿ ಆಳಕ್ಕೆ ಹೋಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಸದ್ಯ ಶವವನ್ನು ಹೊರ ತೆಗೆಯಲಾಗಿದೆ. ತೆರಕಣಾಂಬಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.