ಚಾಮರಾಜನಗರ: ಒಂದು ದಕ್ಷಿಣ ಭಾರತದಲ್ಲೇ ಹೆಚ್ಚು ಫೋಟೋ ಕ್ಲಿಕ್ಕಿಸಿಕೊಂಡ ಹುಲಿ, ಮತ್ತೊಂದು ಎರಡೇ ದಿನದಲ್ಲಿ ಲಕ್ಷಾಂತರ ಮಂದಿಯ ಮನಕದ್ದ ಅಪರೂಪದ ಕರಿಚಿರತೆ.
ಹೌದು, ಬಂಡೀಪುರ ಅಭಯಾರಣ್ಯವನ್ನು ವಿದೇಶಿಗರಿಗೂ ಪರಿಚಯಿಸಿದ್ದ ಪ್ರಿನ್ಸ್ ಹುಲಿಯಂತೆ, ಇತ್ತೀಚೆಗೆ ಕಬಿನಿಯನ್ನು ಪ್ರವಾಸಿಗರ ಸ್ವರ್ಗವನ್ನಾಗಿಸುತ್ತಿದೆ ಅಪರೂಪದ ಕರಿಚಿರತೆ ಬಘೀರಾ.
ಇದಕ್ಕೆ ಸಾಕ್ಷಿ ಎಂಬಂತೆ ನಿಕಾನ್ ಕ್ಯಾಮರಾ ರಾಯಭಾರಿಯಾದ ಶಾಜ್ ಜುಂಗ್ ಕ್ಲಿಕ್ಕಿಸಿದ ಕಬಿನಿಯ ಕರಿಚಿರತೆಯ 2 ಪೋಟೋಗಳು ಅರ್ಥ್ ಟ್ವಿಟರ್ ಖಾತೆಯಲ್ಲಿ ಬಂದಿದ್ದೇ ತಡ 56 ಸಾವಿರಕ್ಕೂ ಹೆಚ್ಚು ರಿಟ್ವೀಟ್ಗಳಾಗಿದ್ದು ವಾಟ್ಸಾಪ್ ಸ್ಟೇಟಸ್ನಲ್ಲಿ ಇದರ ಫೋಟೋ ಹರಿದಾಡುತ್ತಿದೆ.
ಒಂದು ಕಾಲದಲ್ಲಿ ಬಂಡೀಪುರ ಪ್ರಿನ್ಸ್ ಕೂಡ ಪ್ರವಾಸಿಗರ ಮನಗೆದ್ದು ವಿದೇಶಿ ಛಾಯಾಗ್ರಾಹಕರು ಆ ಹುಲಿಯ ಫೋಟೋ ತೆಗೆಯಲೇ ಬಂಡೀಪುರಕ್ಕೆ ಬರುತ್ತಿದ್ದರು. ಯಾರಿಗೂ ಕ್ಯಾರೇ ಅನ್ನದೇ ತುಂಟಾಟವಾಡುತ್ತಾ ಸಫಾರಿ ಜೀಪಿಗೆ ಸವರಿಕೊಂಡು ಹೋಗುವಂತ ಧೈರ್ಯಶಾಲಿಯಾಗಿತ್ತು ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ವೇಣುಗೋಪಾಲ್.