ಚಾಮರಾಜನಗರ: ಬಂಡೀಪುರ ಸಫಾರಿ ವೇಳೆ ಭಾರಿ ಗಾತ್ರದ ವ್ಯಾಘ್ರ ವಿಡಿಯೋದಲ್ಲಿ ಸೆರೆಯಾಗಿದೆ. ಗತ್ತು, ಗಾಂಭೀರ್ಯದ ನಡಿಗೆ ಹಾಕುತ್ತಾ ನಡೆದು ಬರುತ್ತಿರುವ ಈ ಹುಲಿರಾಯನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲಿ... ಹೆಬ್ಬುಲಿ! ಬಂಡೀಪುರದ ಈ ವ್ಯಾಘ್ರನ ವಿಡಿಯೋ ಸಖತ್ ವೈರಲ್ - undefined
ಇಂದು ಬೆಳಗಿನ ಸಫಾರಿಯಲ್ಲಿ ಹೆಬ್ಬುಲಿ ಕಾಣಸಿಕ್ಕಿದ್ದು, ಪ್ರವಾಸಿಗರೊಬ್ಬರು ಸ್ಲೋ ಮೋಷನ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಹುಲಿ.. ಹುಲಿ.. ಹೆಬ್ಬುಲಿ..!
ಇಂದು ಬೆಳಗಿನ ಸಫಾರಿ ವೇಳೆ ಈ ಹುಲಿ ಕಾಣಸಿಕ್ಕಿದ್ದು, ಪ್ರವಾಸಿಗರೊಬ್ಬರು ಸ್ಲೋ ಮೋಷನ್ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಹೆಬ್ಬುಲಿಯನ್ನು ಕಂಡ ಪ್ರವಾಸಿಗರು ಒಂದು ಕ್ಷಣ ಭಯಭೀತರಾಗಿದ್ದರಂತೆ.
ಈ ಸಂಬಂಧ ಬಂಡಿಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಯೊಂದಿಗೆ ಮಾತನಾಡಿ, ಬಂಡೀಪುರದಲ್ಲಿ ಕಂಡುಬಂದ ಹುಲಿ ದೃಶ್ಯ ಇದಾಗಿದ್ದು, ಇದಕ್ಕಿಂತಲೂ ಭಾರೀ ಗಾತ್ರದ ಹುಲಿಗಳು ನಮ್ಮಲ್ಲಿವೆ ಎಂದು ಪ್ರತಿಕ್ರಿಯಿಸಿದರು.
Last Updated : Jun 28, 2019, 7:13 PM IST