ಚಾಮರಾಜನಗರ: ಮಹಾಮಾರಿ ಕೊರೊನಾ ವೈರಸ್ ಗೆ ತುತ್ತಾಗಿ ಜಿಲ್ಲೆಯ ಇಬ್ಬರು ಮೃತಪಟ್ಟಿದ್ದಾರೆ. ಹಾಗು 99 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1320ಕ್ಕೆ ಏರಿಕೆಯಾಗಿದೆ
ಚಾಮರಾಜನಗರದಲ್ಲಿ 99 ಸೋಂಕು ಪ್ರಕರಣಗಳು ಪತ್ತೆ: ಇಬ್ಬರು ಬಲಿ! - New covid case
ಜಿಲ್ಲೆಯಲ್ಲಿಂದು 99 ಜನರಿಗೆ ಕೊರೊನಾ ವಕ್ಕರಿಸುವ ಮೂಲಕ ಸೋಂಕಿತರ ಸಂಖ್ಯೆ 1320ಕ್ಕೆ ತಲುಪಿದೆ. ಹಾಗು ಇಬ್ಬರು ಸಾವನಪ್ಪಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಹನೂರು ತಾಲೂಕಿನ ಎಲ್ಲೆಮಾಳದ 38 ವರ್ಷದ ಪುರುಷ ಹಾಗು ಚಾಮರಾಜನಗರದ 70 ವರ್ಷದ ವೃದ್ಧರಿಗೆ ಸೋಂಕು ತಗುಲಿದ ಹಿನ್ನೆಲೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ಗುರುತಿಸಿರುವ ಜಾಗದಲ್ಲಿ ಪಿಎಫ್ಐ ಸಂಘಟನೆ ಗೌರವಯುತವಾಗಿ ನೆರವೇರಿಸಿದೆ.
47 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 438ರಷ್ಟಿದೆ. 18 ಮಂದಿ ಐಸಿಯುನಲ್ಲಿ ದಾಖಲಾಗಿದ್ದು ಬರೋಬ್ಬರಿ 1558 ಮಂದಿ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು 1 ವರ್ಷ, 3, 4, 7, 8 ವರ್ಷದ ಮಕ್ಕಳು ಸೇರಿದಂತೆ ಗುಂಡ್ಲುಪೇಟೆ ತಾಲೂಕಿನ 85 ವರ್ಷದ ವೃದ್ಧೆಯೂ ಸಹ ಮಹಾಮಾರಿ ಕೊರೊನಾ ಜಯಿಸಿ ಮನೆಗೆ ಮರಳಿದ್ದಾರೆ.