ಚಾಮರಾಜನಗರ: ಕ್ಲೋಸ್ಡೌನ್ ಅವಧಿಯಲ್ಲೂ ಮಹಾಮಾರಿ ಹೆಚ್ಚಾಗುತ್ತಿದ್ದು ಜಿಲ್ಲೆಯಲ್ಲಿಂದು ಬರೋಬ್ಬರಿ 910 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 4522ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ ಮತ್ತೆ 910 ಕೊರೊನಾ ಕೇಸ್:12 ಮಂದಿ ಸೋಂಕಿಗೆ ಬಲಿ - ಚಾಮರಾಜನಗರದಲ್ಲಿ ಕೊರೊನಾ
ಚಾಮರಾಜನಗರದಲ್ಲಿ ಮತ್ತೆ 910 ಕೊರೊನಾ ಕೇಸ್ಗಳು ಪತ್ತೆಯಾಗಿದ್ದು, ಸೋಂಕಿಗೆ 12 ಮಂದಿ ಬಲಿಯಾಗಿದ್ದಾರೆ.
![ಚಾಮರಾಜನಗರದಲ್ಲಿ ಮತ್ತೆ 910 ಕೊರೊನಾ ಕೇಸ್:12 ಮಂದಿ ಸೋಂಕಿಗೆ ಬಲಿ 910 Corona Case Again in Chamarajanagar](https://etvbharatimages.akamaized.net/etvbharat/prod-images/768-512-11699841-thumbnail-3x2-vish.jpg)
ಚಾಮರಾಜನಗರದಲ್ಲಿ ಮತ್ತೆ 910 ಕೊರೊನಾ ಕೇಸ್
ಇಂದು 562 ಮಂದಿ ಗುಣಮುಖರಾಗಿದ್ದಾರೆ. 50 ಮಂದಿ ಐಸಿಯುನಲ್ಲಿದ್ದು 3185 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 10,920 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇನ್ನೂ ಕೊರೊನಾ ಸೋಂಕಿತರ ಸಾವಿನ ಸರಣಿ ಮುಂದುವರೆದಿದ್ದು, ಇಂದು 12 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 237ಕ್ಕೆ ಏರಿಕೆಯಾಗಿದೆ.