ಚಾಮರಾಜನಗರ:ಜಿಲ್ಲೆಯಲ್ಲಿ ಇಂದು ಬರೋಬ್ಬರಿ 90 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 990ಕ್ಕೆ ಏರಿಕೆಯಾಗಿದೆ.
ಇಂದಿನ 90 ಪಾಸಿಟಿವ್ ಪ್ರಕರಣ ಇಲ್ಲಿಯವರೆಗೆ ಜಿಲ್ಲೆಯಲ್ಲಿ ದೃಢವಾದ ದೊಡ್ಡ ಸಂಖ್ಯೆಯಾಗಿದೆ. 27 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 1,105 ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಚಾಮರಾಜನಗರದಲ್ಲಿ 33, ಕೊಳ್ಳೇಗಾಲ 28, ಹನೂರು 01, ಗುಂಡ್ಲುಪೇಟೆ 15, ಯಳಂದೂರು ತಾಲೂಕಿನಲ್ಲಿ 13 ಕೇಸ್ ಪತ್ತೆಯಾಗಿದೆ. ಜಿಲ್ಲೆಯ ಯಳಂದೂರಿನಲ್ಲಿ 110 ಕೇಸ್ ಆಗಿದ್ದು ಶತಕ ದಾಟಿದ ಜಿಲ್ಲೆಯ 4ನೇ ತಾಲೂಕು ಇದಾಗಿದೆ.
ಇಂದು 6 ಮಂದಿ ಮಕ್ಕಳು ಹಾಗೂ 95 ವರ್ಷದ ವೃದ್ಧ ಸೇರಿದಂತೆ 60 ವರ್ಷ ಮೇಲ್ಪಟ್ಟ 10 ಮಂದಿ ಸೋಂಕಿಗೆ ಈಡಾಗಿದ್ದಾರೆ. ಅಲ್ಲದೇ 60 ವರ್ಷ ಮೇಲ್ಪಟ್ಟ ಐವರು, 8, 13, 10 ವರ್ಷದ ಮಕ್ಕಳು ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.