ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 80 ಜನರಿಗೆ ಕೊರೊನಾ ಸೋಂಕು ತಗಿಲಿದ್ದು, 23 ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ತಿಳಿಸಿದೆ.
ಚಾಮರಾಜನಗರದಲ್ಲಿ ಇಂದು 80 ಜನರಿಗೆ ಕೊರೊನಾ - corona cases
ಚಾಮರಾಜನಗರದಲ್ಲಿ ಇಂದು 80 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. 23 ಜನರು ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಚಾಮರಾಜನಗರದಲ್ಲಿ ಇಂದು 80 ಜನರಿಗೆ ಕೊರೊನಾ
ಇದುವರೆಗೂ ಸೋಂಕಿತರ ಸಂಖ್ಯೆ 3018ಕ್ಕೆ ಏರಿಕೆಯಾಗಿದೆ. ಸಕ್ರಿಯ 606 ಸೋಂಕಿತರಿಗೆ ವಿವಿಧೆಡೆ ಚಿಕಿತ್ಸೆ ನೀಡಲಾಗುತ್ತಿದೆ. 159 ಮಂದಿ ಹೋಂ ಐಸೋಲೇಷನ್ನಲ್ಲಿದ್ದು, 38 ಮಂದಿ ಐಸಿಯುನಲ್ಲಿದ್ದಾರೆ. 895 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಗುಂಡ್ಲುಪೇಟೆ ತಾಲೂಕಿನ ಕೋಡಹಳ್ಳಿ ಗ್ರಾಮದ 63 ವರ್ಷದ ಮಹಿಳೆ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಮೃತಪಟ್ಟಿದ್ದಾರೆ. ನಿಧನದ ಬಳಿಕ ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ.