ಚಾಮರಾಜನಗರ:ನಾಲಿಗೆಯಿಂದ ಮೂಗು ಮುಟ್ಟಿಸುವ ಹಲವರನ್ನು ನೀವು ಕಂಡಿರುತ್ತೀರಿ. ಆದರೆ, ಈ ಬಾಲೆ ಮಾಡುವ ಅಂಗಸಾಧನೆ ಕಂಡರೆ ನಿಜಕ್ಕೂ ಅಚ್ಚರಿಗೊಳಗಾಗುತ್ತೀರಿ.
ಹೌದು, ಗುಂಡ್ಲುಪೇಟೆ ತಾಲೂಕಿನ ವೀರನಪುರದ ಮಹೇಂದ್ರ ಎಂಬುವರ 8 ವರ್ಷದ ಪುತ್ರಿ ಖುಷಿ ಚಕಚಕನೇ ಮಾಡುವ ಅಂಗಸಾಧನೆಗೆ ಎಲ್ಲರೂ ಬಾಯಿ ಮೇಲೆ ಬೆರಳಿಡುತ್ತಾರೆ.
ಖುಷಿ ಚಕಚಕನೇ ಮಾಡುವ ಅಂಗಸಾಧನೆ ಹತ್ತು ಬೆರಳಿನಿಂದಲೂ ಖುಷಿ ತನ್ನ ಮಣಿಕಟ್ಟನ್ನು ಮುಟ್ಟಿಸಲಿದ್ದು, ಪಾದದಿಂದ ತನ್ನ ತಲೆಯನ್ನು ಲೀಲಾಜಾಲವಾಗಿ ಮುಟ್ಟಿಸುತ್ತಾಳೆ. ವಿಶೇಷ ಅಂದರೆ ಈಕೆ ಎಲ್ಲೂ ಹೋಗಿ ಕಲಿತ ವಿದ್ಯೆಯಲ್ಲ. ಬದಲಾಗಿ ಪೋಷಕರು ಹೇಳಿಕೊಟ್ಟಂತೆ ಕಲೆಯನ್ನು ರೂಢಿಸಿಕೊಂಡು ಎಲ್ಲರನ್ನು ಬೆರಗುಗೊಳಿಸುತ್ತಿದ್ದಾಳೆ.
ಈ ಕುರಿತು ಸ್ಥಳೀಯರಾದ ಮಂಜುನಾಥ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಯಾವುದೇ ಅಭ್ಯಾಸವಿಲ್ಲದೇ ಈಕೆ ಅಂಗಸಾಧನೆ ಮಾಡುತ್ತಿದ್ದಾಳೆ. ಸೂಕ್ತ ತರಬೇತಿ ನೀಡಿದರೆ ಜಿಮ್ನಾಸ್ಟಿಕ್ನಲ್ಲಿ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಅಲ್ಲದೆ, ಈ ಬಾಲಕಿಗೆ ಈ ಸಾಧನೆ ಬಹಳ ದಿನಗಳ ನಂತರ ಕರಗತವಾಗಿದೆ. ಈ ಸುದ್ದಿಯಲ್ಲಿರುವ ವಿಡಿಯೋವನ್ನು ನೋಡಿ ಬೇರೆ ಮಕ್ಕಳು ಅಥವಾ ಯುವಕರು ಈ ರೀತಿ ಪ್ರಯತ್ನಿಸುವ ಮುನ್ನ ತಜ್ಞರ ಸಲಹೆ ಮತ್ತು ತರಬೇತಿ ಅಗತ್ಯ ಅನ್ನೋದನ್ನು ಮರೆಯಬಾರದು.