ಕರ್ನಾಟಕ

karnataka

ETV Bharat / state

ಮಲೆಮಹದೇಶ್ವರ ಬೆಟ್ಟಕ್ಕೆ 8 ಲಕ್ಷ ಭಕ್ತರು, 7 ಲಕ್ಷ ಲಾಡು ಬಿಕರಿ.. ಪ್ಲಾಸ್ಟಿಕ್​ ತೆರವಿಗೆ ಬೇಕು 15 ದಿನ! - ಮಾದಪ್ಪ

ರಥೋತ್ಸವ ದಿನ ಇಂದು ಮಧ್ಯಾಹ್ನದವರೆಗೆ 7.10 ಲಕ್ಷ ಲಾಡು ಖರ್ಚಾಗಿವೆ. ಇನ್ನೂ ಒಂದು ಲಕ್ಷ ಲಾಡು ಬಿಕರಿಯಾಗುವ ಸಾಧ್ಯತೆ ಇದೆ‌. ಈ ಜನಸ್ತೋಮ ನೋಡಿದರೇ 28 ರಂದು ನಡೆಯುವ ಹುಂಡಿ ಎಣಿಕೆಯಲ್ಲಿ ಎರಡು ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದರು.

Malemahadeshwara hill
ಮಲೆಮಹದೇಶ್ವರ ಬೆಟ್ಟ

By

Published : Feb 24, 2020, 7:46 PM IST

ಚಾಮರಾಜನಗರ:ರಾಜ್ಯ ಸೇರಿದಂತೆ ಹೊರರಾಜ್ಯಗಳಿಂದಲೂ ಬರೋಬ್ಬರಿ 8 ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಶ್ರೀ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಮಾಡಿದ್ದಾರೆ.

ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ಮಾಹಿತಿ ನೀಡಿದ್ದು, ಫೆ.19 ರಿಂದ 24ರವರೆಗೂ ಕ್ಷೇತ್ರಕ್ಕೆ 8 ಲಕ್ಷ ಮಂದಿ ಭೇಟಿ ನೀಡಿದ್ದರು. 6 ಲಕ್ಷ ಭಕ್ತಾದಿಗಳು ವಿಶೇಷ ದಾಸೋಹದ ಪ್ರಸಾದ ಸೇವಿಸಿದ್ದಾರೆ. ರಥೋತ್ಸವವಾದ ಇಂದೇ ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ಕ್ಷೇತ್ರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಮಲೆಮಹದೇಶ್ವರ ಬೆಟ್ಟ

ರಥೋತ್ಸವ ದಿನ ಇಂದು ಮಧ್ಯಾಹ್ನದವರೆಗೆ 7.10 ಲಕ್ಷ ಲಾಡು ಖರ್ಚಾಗಿವೆ. ಇನ್ನೂ ಒಂದು ಲಕ್ಷ ಲಾಡು ಬಿಕರಿಯಾಗುವ ಸಾಧ್ಯತೆ ಇದೆ‌. ಈ ಜನಸ್ತೋಮ ನೋಡಿದರೇ 28 ರಂದು ನಡೆಯುವ ಹುಂಡಿ ಎಣಿಕೆಯಲ್ಲಿ ಎರಡು ಕೋಟಿ ರೂ. ದಾಟುವ ನಿರೀಕ್ಷೆ ಇದೆ ಎಂದರು.

ತಾಳಬೆಟ್ಟದಿಂದ ಶ್ರೀಕ್ಷೇತ್ರದ ಆವರಣದಲ್ಲಿ ಭಕ್ತರು ಬಿಸಾಡಿರುವ ಪ್ಲಾಸ್ಟಿಕ್ ಬಾಟಲಿ, ತಟ್ಟೆಗಳು, 3 ಲಾರಿಯಷ್ಟು ಚಪ್ಪಲಿಗಳ ವಿಲೇವಾರಿಗೆ 15 ದಿನ ಬೇಕಾಗಬಹುದು. ಹೆಚ್ಚುವರಿ 30 ಮಂದಿ ಪೌರ ಕಾರ್ಮಿಕರನ್ನು ಸ್ವಚ್ಛತಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಶಿವರಾತ್ರಿ ಸಂಭ್ರಮಕ್ಕೆ ಇಂದು ರಾತ್ರಿ ತೆಪ್ಪೋತ್ಸವದ ಮೂಲಕ ತೆರೆ ಬೀಳಲಿದೆ. ಈ ಬಾರಿಯ ಮಹಾಶಿವರಾತ್ರಿ ವಿಜೃಂಭಣೆಯಿಂದ ನೆರವೇರಿದೆ ಎಂದು ಜೈ ವಿಭವಸ್ವಾಮಿ ಹೇಳಿದ್ದಾರೆ.

ABOUT THE AUTHOR

...view details