ಕರ್ನಾಟಕ

karnataka

ETV Bharat / state

ನಿಗೂಢವಾಗಿ 8 ಜಾನುವಾರು ಸಾವು: 50ಕ್ಕೂ ಅಧಿಕ ಹಸು ಅಸ್ವಸ್ಥ..! - ಚಾಮರಾಜನಗರದಲ್ಲಿ 8 ಹಸುಗಳು ಸಾವು

ಹನೂರು ತಾಲೂಕಿನ ಹುತ್ತೂರಿನಲ್ಲಿ ಎಂಟು ಹಸುಗಳು ಸಾಲು ಸಾಲಾಗಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜಾನುವಾರುಗಳು ಅಸ್ವಸ್ಥಗೊಂಡಿವೆ.

8 cows death in Chamarajanagar
ನಿಗೂಢವಾಗಿ 8 ಜಾನುವಾರುಗಳು ಸಾವು

By

Published : Jul 4, 2020, 1:37 AM IST

ಚಾಮರಾಜನಗರ: ನಿಗೂಢವಾಗಿ 8 ಹಸುಗಳು ಮೃತಪಟ್ಟಿರುವ ಧಾರುಣ ಘಟನೆ, ಹನೂರು ತಾಲೂಕಿನ ಪಿ.ಜಿ. ಪಾಲ್ಯ ಸಮೀಪದ ಹುತ್ತೂರಿನಲ್ಲಿ ನಡೆದಿದೆ.

ಗ್ರಾಮದ ಶಿವಮೂರ್ತಿ, ಶಿವಮಲ್ಲನಾಯ್ಕ ಹಾಗೂ ವೆಂಕಟೇಶ್ ಎಂಬವರಿಗೆ ಸೇರಿದ ಜಾನುವಾರುಗಳು ಸಾವಿಗೀಡಾಗಿದ್ದು, ಇಂದು ಗ್ರಾಮದ ಗೋಮಾಳಕ್ಕೆ ಮೇಯಲು ಬಿಟ್ಟಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಸಂಜೆಯಾದರೂ ಹಸುಗಳು ಬರದಿದ್ದನ್ನು ಗಮನಿಸಿ ಮಾಲೀಕರು ಹುಡುಕಿದಾಗ ಸಾಲು-ಸಾಲಾಗಿ ಹಸುಗಳು ಮೃತಪಟ್ಟು, ಹಲವು ಅಸ್ವಸ್ಥಗೊಂಡಿರುವುದನ್ನು ಕಂಡು ಹೌಹಾರಿದ್ದಾರೆ.

ಸದ್ಯ ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ 50ಕ್ಕೂ ಹೆಚ್ಚು ಹಸುಗಳಿಗೆ ಚಿಕಿತ್ಸೆ ನೀಡಿದರೂ, ಹಲವು ಚಿಂತಾಜನಕ ಸ್ಥಿತಿಯಲ್ಲಿದೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details