ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರದಲ್ಲಿ ಕೊರೊನಾ ಭೀತಿ ನಡುವೆ ರೋಗನಿರೋಧಕ ಶಕ್ತಿ ಹೆಚ್ಚಲೆಂದು ರೈತರೊಬ್ಬರು 7.5 ಕ್ವಿಂಟಾಲ್ ಸಾವಯವ ಹುರುಳಿಯನ್ನ ಉಚಿತವಾಗಿ ಹಂಚಿದ್ದಾರೆ.
ಏಳೂವರೆ ಕ್ವಿಂಟಾಲ್ ಸಾವಯವ ಹುರುಳಿ ಉಚಿತ ಹಂಚಿದ ರೈತ...! - Mahesh Kumar, leader of the Farmers' Union
ಹೆಗ್ಗವಾಡಿಪುರದ ರೈತ ಸಂಘದ ಮುಖಂಡ ಮಹೇಶ್ ಕುಮಾರ್ ,ಸಾವಯವ ವಿಧಾನದಲ್ಲಿ ಬೆಳೆದ 7.5 ಕ್ವಿಂಟಾಲ್ ಹುರುಳಿಯನ್ನು ಹೆಗ್ಗವಾಡಿಪುರ, ದೇಶವಳ್ಳಿ ಗ್ರಾಮದ ಜನರಿಗೆ ಅರ್ಧ ಕಿಲೋ, ಒಂದು ಕಿಲೋ ಪ್ಯಾಕೇಟ್ ಗಳನ್ನ ಮಾಡಿ ಉಚಿತವಾಗಿ ಹಂಚಿದ್ದಾರೆ.
![ಏಳೂವರೆ ಕ್ವಿಂಟಾಲ್ ಸಾವಯವ ಹುರುಳಿ ಉಚಿತ ಹಂಚಿದ ರೈತ...! 7.5 Quintal Organic Bean's Free Shared Farmer .](https://etvbharatimages.akamaized.net/etvbharat/prod-images/768-512-6752858-809-6752858-1586615027116.jpg)
ಹೆಗ್ಗವಾಡಿಪುರದ ರೈತ ಸಂಘದ ಮುಖಂಡ ಮಹೇಶ್ ಕುಮಾರ್ ,ಸಾವಯವ ವಿಧಾನದಲ್ಲಿ ಬೆಳೆದ 7.5 ಕ್ವಿಂಟಾಲ್ ಹುರುಳಿಯನ್ನು ಹೆಗ್ಗವಾಡಿಪುರ, ದೇಶವಳ್ಳಿ ಗ್ರಾಮದ ಜನರಿಗೆ ಅರ್ಧ ಕಿಲೋ, ಒಂದು ಕಿಲೋ ಪ್ಯಾಕೇಟ್ ಗಳನ್ನ ಮಾಡಿ ಉಚಿತವಾಗಿ ಹಂಚಿದ್ದಾರೆ. ಈ ಹಿಂದೆ ಕಾಲರಾ, ಪ್ಲೇಗ್ ಸಾಂಕ್ರಾಮಿಕ ರೋಗಗಳು ಬಂದಾಗ ಹಿರಿಯರು ಹುರುಳಿ ಸಾರು, ಬೇಯಿಸಿದ ಹುರುಳಿ ಕಾಳನ್ನು ತಿನ್ನುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದರು. ಆದ್ದರಿಂದ, ಕೊರೊನಾ ವೈರಸ್ ನಿಂದ ಪಾರಾಗಾಬೇಕೆಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಲು ಹುರುಳಿ ಸಹಕಾರಿಯಾಗಿದೆ. ಆದ್ದರಿಂದ ಉಚಿತವಾಗಿ ಹಂಚುತ್ತಿರುವುದಾಗಿ ಅವರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಮಹೇಶ್ ಕುಮಾರ್ ಈ ಹಿಂದೆ ಹನುಮಫಲದ ಮೂಲಕ ಕ್ಯಾನ್ಸರ್, ಎಚ್ಐವಿ ಏಡ್ಸ್ ಗೆ ರಾಮಬಾಣದ ಔಷಧವನ್ನ ಹತ್ತಾರು ಸಾವಿರ ಮಂದಿಗೆ ಉಚಿತವಾಗಿ ವಿತರಿಸುತ್ತಿದ್ದರು. ಕೊರೊನ ಲಾಕ್ಡೌನ್ ನಿಂದ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಿದ್ದಾರೆ.