ಕರ್ನಾಟಕ

karnataka

By

Published : Apr 20, 2021, 9:40 PM IST

ETV Bharat / state

ಮುಷ್ಕರ ಬೆಂಬಲಿಸಿ ಸೇವೆಗೆ ಗೈರು... ಕೆಎಸ್​ಆರ್​ಟಿಸಿ ಚಾಮರಾಜನಗರ ವಿಭಾಗದಲ್ಲಿ 61 ನೌಕರರು ವಜಾ

ಚಾಮರಾಜನಗರ ಡಿಪೋದಲ್ಲಿ 19, ಗುಂಡ್ಲುಪೇಟೆಯಲ್ಲಿ 9, ಕೊಳ್ಳೇಗಾಲ 8, ಮತ್ತು ನಂಜನಗೂಡು ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 15 ಮಂದಿ ತರಬೇತಿ ನೌಕರರನ್ನು ವಜಾ ಮಾಡಲಾಗಿದ್ದು, 8 ಮಂದಿ ಕಾಯಂ ನೌಕರರಿಗೂ ಗೇಟ್ ಪಾಸ್ ಕೊಟ್ಟಿದ್ದಾರೆ‌.

ksrtc
ಕೆಎಸ್​ಆರ್​ಟಿಸಿ

ಚಾಮರಾಜನಗರ:6ನೇ ವೇತನ ಜಾರಿಗೆ ಆಗ್ರಹಿಸಿ ನಡೆಸಿದ ಮುಷ್ಕರದಲ್ಲಿ ಪಾಲ್ಗೊಂಡ 61 ಮಂದಿ ಸಾರಿಗೆ ಸಂಸ್ಥೆ ನೌಕರರಿಗೆ ಸೇವೆಯಿಂದ ಗೇಟ್ ಪಾಸ್ ಕೊಡಲಾಗಿದೆ.

ನಿರಂತರ ಗೈರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೂ ನೋಟಿಸ್​ಗೆ ಉತ್ತರಿಸದೆ, ಸೇವೆಗೆ ಗೈರಾಗಿ ನೌಕರರ ಮುಷ್ಕರದಲ್ಲಿ ಪಾಲ್ಗೊಂಡ 51 ಟ್ರೈನಿ ನೌಕರರನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ವಜಾಗೊಳಿಸಿ ಆದೇಶಿಸಿದ್ದಾರೆ.

ಚಾಮರಾಜನಗರ ಡಿಪೋದಲ್ಲಿ 19, ಗುಂಡ್ಲುಪೇಟೆಯಲ್ಲಿ 9, ಕೊಳ್ಳೇಗಾಲ 8, ಮತ್ತು ನಂಜನಗೂಡು ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 15 ಮಂದಿ ತರಬೇತಿ ನೌಕರರನ್ನು ವಜಾ ಮಾಡಲಾಗಿದ್ದು, 8 ಮಂದಿ ಕಾಯಂ ನೌಕರರಿಗೂ ಗೇಟ್ ಪಾಸ್ ಕೊಟ್ಟಿದ್ದಾರೆ‌.

ಚಾಮರಾಜನಗರ ವಿಭಾಗಗಳಿಂದ ಬೇರೆ ಉಪವಿಭಾಗಕ್ಕೆ 34 ಜನರನ್ನು ವರ್ಗಾವಣೆ ಮಾಡಿದ್ದು, ಘಟಕದಿಂದ ಘಟಕಕ್ಕೆ 14 ಮಂದಿ ಚಾಲಕ ಕಮ್‌ ನಿರ್ವಾಹಕರನ್ನು ವರ್ಗಾವಣೆ ಮಾಡಲಾಗಿದೆ.

ಓದಿ:ರಾಜ್ಯಪಾಲರು ಸಭೆ ಕರೆದಿದ್ದರಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಅಂತ ಆಯ್ತು: ಸಿದ್ದರಾಮಯ್ಯ

ABOUT THE AUTHOR

...view details