ಕರ್ನಾಟಕ

karnataka

ETV Bharat / state

ಚಾಮರಾಜನಗರ: 58 ಹೊಸ ಪ್ರಕರಣ, ಬೇಗೂರು ಪಿಎಸ್ಐಗೂ ಸೋಂಕು - coronavirus update

ಚಾಮರಾಜನಗರ ಜಿಲ್ಲೆಯಲ್ಲಿ 58 ಮಂದಿಗೆ ಕೊರೊನಾ ವಕ್ಕರಿಸಿದ್ದು, ಇಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 3,076ಕ್ಕೆ, ಮೃತರ ಸಂಖ್ಯೆ 66ಕ್ಕೆ ತಲುಪಿದೆ.

corona hospital
ಕೋವಿಡ್​-19 ಆಸ್ಪತ್ರೆ

By

Published : Sep 14, 2020, 7:47 PM IST

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 58 ಮಂದಿಗೆ ಕೊರೊನಾ ವಕ್ಕರಿಸಿದ್ದು, ಈ ಮೂಲಕ ಅದರ ಸಂಖ್ಯೆ 3,076ಕ್ಕೆ ಏರಿದೆ. ಇಬ್ಬರು ಮಹಾಮಾರಿಗೆ ಬಲಿಯಾಗಿದ್ದಾರೆ. ಬೇಗೂರು ಠಾಣೆ ಎಸ್ಐಗೂ ಸೋಂಕು ತಗುಲಿದ್ದು, ಠಾಣೆಯನ್ನು ಸೀಲ್​​ಡೌನ್​ ಮಾಡಲಾಗಿದೆ.

ಯಳಂದೂರಿನ 63 ವರ್ಷದ ವ್ಯಕ್ತಿ ಹಾಗೂ ಹನೂರಿನ 41 ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದು ಮೃತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಹಾಗೆಯೇ 54 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 608 ಇದ್ದು, 261 ಮಂದಿ ಹೋಂ ಐಸೋಲೇಷನ್​​​​ನಲ್ಲಿ ಇದ್ದಾರೆ. 876 ಪ್ರಾಥಮಿಕ ಹಾಗೂ ದ್ವೀತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ABOUT THE AUTHOR

...view details