ಚಾಮರಾಜನಗರ: ಇಂದು ಜಿಲ್ಲೆಯಲ್ಲಿ 52 ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ 23, ಕೊಳ್ಳೇಗಾಲದಲ್ಲಿ 17, ಗುಂಡ್ಲುಪೇಟೆಯಲ್ಲಿ 3, ಯಳಂದೂರುನಲ್ಲಿ 2, ಹನೂರು ತಾಲೂಕಿನಲ್ಲಿ 7 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಯಳಂದೂರು ತಾಲೂಕಿನ ಕಂದಳ್ಳಿ ಗ್ರಾಮದ 69 ವರ್ಷದ ವೃದ್ಧ ಕಳೆದ 8 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿ, ಸದ್ಯ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಳ್ಳೇಗಾಲದ ದೇವಾಂಗಪೇಟೆಯ 80 ವರ್ಷದ ವೃದ್ಧ ಕಳೆದ 4 ರಂದು ಸೋಂಕಿತರಾಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಪಿಎಫ್ಐ ಸಂಘಟನೆ ಕಾರ್ಯಕರ್ತರು ಗೌರವಯುತವಾಗಿ ನಡೆಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 26 ಸೋಂಕಿತರು ಮೃತಪಟ್ಟಿದ್ದಾರೆ.
ಸದ್ಯ 421 ಸಕ್ರಿಯ ಪ್ರಕರಣಗಳಿದ್ದು, ಹೋಂ ಐಸೋಲೇಷನ್ನಲ್ಲಿ 112, ಐಸಿಯುನಲ್ಲಿ 23 ಮಂದಿ ದಾಖಲಾಗಿದ್ದಾರೆ. 599 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.