ಚಾಮರಾಜನಗರ : ಸಾರಿಗೆ ನೌಕರರು ವೇತ ಹೆಚ್ಚಳಕ್ಕಾಗಿ ಮುಷ್ಕರ ನಡೆಸುತ್ತಿರುವುದರಿಂದ ಚಾಮರಾಜನಗರ ಉಪವಿಭಾಗಕ್ಕೆ 50 ಲಕ್ಷ ರೂ. ನಷ್ಟವಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೆಎಸ್ಆರ್ಟಿಸಿ ಚಾಮರಾಜನಗರ ಉಪವಿಭಾಗ ನಿಯಂತ್ರಣಾಧಿಕಾರಿ ಶ್ರೀನಿವಾಸ್, ಇಂದು ಬಸ್ಗಳು ರಸ್ತೆಗಳಿಯದ ಕಾರಣ 50 ಲಕ್ಷ ರೂ. ನಷ್ಟವಾಗಿದೆ. ಕೆಲ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಬರ್ತೀವಿ, ಬರ್ತೀವಿ ಎನ್ನುತ್ತಿದ್ದಾರೆ, ಆದರೆ, ಬಂದಿಲ್ಲ ಎಂದರು.
ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗಕ್ಕೆ ನಷ್ಟ ನಿರೀಕ್ಷಕರು, ಟಿಸಿಗಳು, ಚಾಲಕರು, ನಿರ್ವಾಹಕರ ಮನವೊಲಿಸಲು ಪ್ರಯತ್ನಿಸಿದರೂ ಫಲಪ್ರದವಾಗಿಲ್ಲ. ಮೆಕ್ಯಾನಿಕ್ ವಿಭಾಗದ ಸಿಬ್ಬಂದಿ ಕೂಡ ಇಂದು ಕೆಲಸಕ್ಕೆ ಹಾಜರಾಗಿಲ್ಲ. ಖಾಸಗಿ ಬಸ್ಗಳು ಬಸ್ ನಿಲ್ದಾಣದ ಮೂಲಕ ಸಂಚರಿಸಲು ಅವಕಾಶ ಕೊಟ್ಟಿರುವುದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎಂದು ತಿಳಿಸಿದರು.
182 ಖಾಸಗಿ ಬಸ್ ಸಂಚಾರ : ಚಾಮರಾಜನಗರದಿಂದ ಗುಂಡ್ಲುಪೇಟೆ, ಕೊಳ್ಳೇಗಾಲ, ಮೈಸೂರಿಗೆ 182 ಖಾಸಗಿ ಬಸ್ಗಳು ಸಂಚರಿಸುತ್ತಿವೆ. ಪ್ರಯಾಣಿಕರಿಗಾಗಿ ತಾಸುಗಟ್ಟಲೇ ಕಾಯುತ್ತಿದ್ದ ಖಾಸಗಿ ಬಸ್ಗಳು ಇಂದು ಕೆಲವೇ ನಿಮಿಷಗಳಲ್ಲಿ ಭರ್ತಿಯಾಗುತ್ತಿದ್ದ ದೃಶ್ಯ ಕಂಡು ಬಂತು. ಇದರಿಂದ ಖಾಸಗಿ ಬಸ್ನವರಿಗೆ ಭಾರೀ ಲಾಭವಾಗಿದೆ.
ಹಣ ಕೊಟ್ಟು ಬಂದ ವಿದ್ಯಾರ್ಥಿಗಳು :ವಿದ್ಯಾರ್ಥಿ ಪಾಸ್ ಇದ್ದ ವಿದ್ಯಾರ್ಥಿಗಳನ್ನು ಖಾಸಗಿ ಬಸ್ನವರು ಉಚಿತವಾಗಿ ಕರೆದೊಯ್ಯಬೇಕೆಂದು ಡಿಸಿ ಸೂಚಿಸಿದ್ದರೂ ಪಾಲನೆಯಾಗಿಲ್ಲ. ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಿಂದ ಚಾಮರಾಜನಗರಕ್ಕೆ ವಿದ್ಯಾರ್ಥಿಗಳು ಹಣ ಕೊಟ್ಟು ಬಂದಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಜೀಪ್ನಲ್ಲಿ ಡ್ರಾಪ್ ಕೊಟ್ಟ ಪಿಎಸ್ಐ :ಹನೂರು ತಾಲೂಕಿನ ಅಜ್ಜೀಪುರದ ಬಳಿ ಶಾಲಾ ಕಾಲೇಜಿಗೆ ತೆರಳಲು ಬಸ್ಗಾಗಿ ಪರಿತಪಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಂಡ ರಾಮಾಪುರ ಪಿಎಸ್ಐ, ವಿದ್ಯಾರ್ಥಿಗಳಿಗೆ ಡ್ರಾಪ್ ಕೊಟ್ಟು ಸಹಕರಿಸಿದರು.