ಚಾಮರಾಜನಗರ: ಇಂದು ಜಿಲ್ಲೆಯಲ್ಲಿ ಹೊಸದಾಗಿ 50 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1601ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿಂದು 50 ಕೊರೊನಾ ಪ್ರಕರಣ ಪತ್ತೆ... 73 ಮಂದಿ ಗುಣಮುಖ
ಜಿಲ್ಲೆಯಲ್ಲಿಂದು 50 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಮತ್ತು 73 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
Chamrajnagara corona case
ಇಂದು ಪತ್ತೆಯಾದ ಸೋಂಕಿತರ ಪೈಕಿ 28 ಐಎಲ್ಐ ಪ್ರಕರಣವಾಗಿವೆ. 25 ಸೋಂಕಿತರು 35 ವರ್ಷದ ಒಳಗಿನವರಾಗಿದ್ದಾರೆ. ಇನ್ನೂ 73 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಪೈಕಿ 14 ಮಂದಿ ಹಿರಿಯ ನಾಗರಿಕರಿದ್ದಾರೆ.
ಸದ್ಯ 424 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, 130 ಮಂದಿ ಹೋಂ ಐಸೋಲೇಷನ್ನಲ್ಲಿದ್ದಾರೆ. 548 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಈವರೆಗೆ 30 ಮೃತ ಪ್ರಕರಣಗಳು ವರದಿಯಾಗಿದೆ.