ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ವೇಳೆ ಕಾವೇರಿ ನದಿ ತೀರದಲ್ಲಿ ಅಕ್ರಮ ಮರಳು‌ ಸಾಗಾಟ: ಐವರ ಬಂಧನ - Kollegala crime

ಲಾಕ್ ಡೌನ್ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಮರಳು‌ ಸಾಗಾಟ
ಅಕ್ರಮ ಮರಳು‌ ಸಾಗಾಟ

By

Published : Jun 1, 2021, 4:04 AM IST

ಕೊಳ್ಳೇಗಾಲ: ಲಾಕ್ ಡೌನ್ ಸಂದರ್ಭದಲ್ಲಿ ಅಕ್ರಮ ಮರಳು ಸಾಗಣೆ‌ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆ ಮರಳು ತುಂಬಿದ ಐದು ಎತ್ತಿನಗಾಡಿಯನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಮುಳ್ಳೂರು ಗ್ರಾಮದ ಮಹದೇವಸ್ವಾಮಿ, ರಾಜೇಶ್, ಬಸವರಾಜು, ರೇಚಣ್ಣಸ್ವಾಮಿ, ಮಹೇಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಮುಳ್ಳೂರು ಸಮೀಪದ ಕಾವೇರಿ ನದಿ ತೀರದಲ್ಲಿ ಅಕ್ರಮವಾಗಿ ಮರಳು ತೆಗೆದು ಎತ್ತಿನಗಾಡಿತಲ್ಲಿ ಸಾಗಿಸುತ್ತ ವೇಳೆ ಸಬ್ ಇನ್ಸ್ ಪೆಕ್ಟರ್ ವಿ.ಸಿ.ಅಶೋಕ್ ತಂಡ ದಾಳಿ‌ ನಡೆಸಿದೆ. ಪೊಲೀಸರ ಕಂಡ ಆರೋಪಿಗಳು ಓಡಲು ಮುಂದಾಗಿದ್ದು ಕೊನೆಗೂ ಕೈಗೆ ಸಿಕ್ಕಿಬಿದ್ದಿದ್ದಾರೆ.

ದಾಳಿಯಲ್ಲಿ ಮರಳು ತುಂಬಿದ ಐದು ಎತ್ತಿನಗಾಡಿಯನ್ನು‌ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನು ಓದಿ:ಕೊರೊನಾ ತೊಲಗಲೆಂದು ಬೀದಿಗೆ ದಿಗ್ಬಂಧನ : ನಿತ್ಯ ಎರಡು ಮಡಿಕೆಯಲ್ಲಿ ಧೂಪ

ABOUT THE AUTHOR

...view details