ಕೊಳ್ಳೇಗಾಲ( ಚಾ. ನಗರ): ಇಂದು ನಾಲ್ವರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸದ್ಯ ಅವರನ್ನು ಕೋವಿಡ್ ಐಸಿಯು ಘಟಕಕ್ಕೆ ರವಾನಿಸಲಾಗಿದೆ.
ತಮಿಳುನಾಡಿನ ಮಧುರೈಗೆ ಕೆಲಸದ ನಿಮ್ಮಿತ್ತ ಹೋಗಿ ಬಂದಿದ್ದ ಆರ್.ಎಂ ಚೌಟ್ರಿ ಸಮೀಪದ ನಿವಾಸಿ 29 ವರ್ಷದ ಯುವಕ, ನೂರ್ ಮೋಹಾಲ್ಲಾ 6ನೇ ಕ್ರಾಸ್ ನ ಹೋಮ್ ಕ್ವಾರೆಂಟೈನ್ ನಲ್ಲಿದ್ದ ತನ್ನ ಅಜ್ಜಿ ಮನೆಗೆಂದು ಪೋಷಕರ ಜೊತೆ ಬೆಂಗಳೂರಿನಿಂದ ಆಗಮಿಸಿದ್ದ 18 ವರ್ಷದ ಯುವತಿ, ಬೆಂಗಳೂರಿನಿಂದ ಬೂದಿತಿಟ್ಟು ಬಡಾವಣೆಗೆ ತನ್ನ ಭಾವನ ಮನೆಗೆ ಆಗಮಿಸಿದ್ದ ಇಬ್ಬರು ಅಕ್ಕ-ತಂಗಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ.