ಚಾಮರಾಜನಗರ: ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿಟ್ಟಿದ್ದನ್ನು ಡಿಸಿಐಬಿ ಪೊಲೀಸರು ಪತ್ತೆಹಚ್ಚಿರುವ ಘಟನೆ ಚಾಮರಾಜನಗರ ತಾಲೂಕಿನ ಚಾಟಿಪುರದಲ್ಲಿ ನಡೆದಿದೆ.
ಅಕ್ರಮ ಪಡಿತರ ಸಂಗ್ರಹ: ಡಿಸಿಐಬಿ ಪೊಲೀಸರಿಂದ 4.8 ಟನ್ ಅಕ್ಕಿ ವಶ - DCIB police
ಚಾಮರಾಜನಗರ ತಾಲೂಕಿನ ಚಾಟಿಪುರದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಅನ್ನಭಾಗ್ಯ ಅಕ್ಕಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಘಟನೆ ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಿಸಿಐಬಿ ಪೊಲೀಸರಿಂದ 4.8 ಟನ್ ಅಕ್ಕಿ ವಶ
ಗ್ರಾಮದ ಸಲೀಂ ಅಲಿಯಾಸ್ ಸಮಿ ಎಂಬಾತ ಮನೆ ಸಮೀಪವೇ ಗೋಡೌನ್ ರೀತಿ ಮಾಡಿಕೊಂಡು ಹೊರರಾಜ್ಯಗಳಿಗೆ ಅನ್ನಭಾಗ್ಯ ಅಕ್ಕಿ ಸಾಗಿಸಲು ಸಂಗ್ರಹಿಸಿಟ್ಟಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪಿಐ ಮಹಾದೇವಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿ 4,800 ಕೆಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು, ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.