ಚಾಮರಾಜನಗರ:ಮಂಗಳವಾರ 36 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 382ಕ್ಕೆ ಏರಿಕೆಯಾಗಿದೆ.
ಚಾಮರಾಜನಗರದಲ್ಲಿ 36 ಮಂದಿಗೆ ಸೋಂಕು ದೃಢ...11 ಜನರು ಗುಣಮುಖ - ಚಾಮರಾಜನಗರ ಲೆಟೆಸ್ಟ್ ನ್ಯೂಸ್
36 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 382ಕ್ಕೆ ಏರಿಕೆಯಾಗಿದೆ ಹಾಗು 11 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ಗುಂಡ್ಲುಪೇಟೆಯಲ್ಲಿ 12, ಚಾಮರಾಜನಗರದಲ್ಲಿ 5, ಕೊಳ್ಳೇಗಾಲದಲ್ಲಿ 6, ಯಳಂದೂರಿನಲ್ಲಿ 11 ಹಾಗೂ ಹನೂರಿನಲ್ಲಿ 2 ಸೋಂಕು ಪ್ರಕರಣ ಪತ್ತೆಯಾಗಿದೆ. ಕೊಳ್ಳೇಗಾಲದಲ್ಲಿ ಈವರೆಗೆ ಒಟ್ಟು 96 ಸೋಂಕು ಪ್ರಕರಣ ಕಾಣಿಸಿಕೊಂಡು ಜಿಲ್ಲೆಯ ಎರಡನೇ ಕೊರೊನಾ ಹಾಟ್ ಸ್ಪಾಟಾಗಿದೆ.
ಕಂಟೈನ್ಮೆಂಟ್ ಜೋನ್ನಲ್ಲೇ ಮಂಗಳಾವಾರದಂದು 14 ಮಂದಿಗೆ ಸೋಂಕು ದೃಢಪಟ್ಟಿದೆ. ಯಳಂದೂರು ಮಾಂಬಳ್ಳಿಯಲ್ಲಿ 7 ಮಂದಿ ಸಂಬಂಧಿಕರಿಗೆ ಓರ್ವನಿಂದ ವೈರಸ್ ಹರಡಿದೆ. ಸೋಂಕಿತರಲ್ಲಿ 6 ಮಂದಿ 60 ವರ್ಷಕ್ಕೂ ಮೇಲ್ಪಟ್ಟವರಾಗಿದ್ದಾರೆ.
ಓರ್ವನ ಸಾವು:ಮಾಂಬಳ್ಳಿ ಕಂಟೈನ್ಮೆಂಟ್ ಜೋನ್ನಲ್ಲಿ 80 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಇವರು ಮೃತಪಟ್ಟಿದ್ದಾರೆ. ಆದರೆ, ಗಂಟಲು ದ್ರವ ಪರೀಕ್ಷೆಯಲ್ಲಿ ಇವರಿಗೆ ಸೋಂಕು ದೃಢವಾದ ನಂತರ ಕೊರೊನಾ ಸೋಂಕಿತರ ಅಂತ್ಯಸಂಸ್ಕಾರದಂತೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ.
ಜಿಲ್ಲೆಯಲ್ಲಿ ಮಂಗಳವಾರದಂದು 11 ಮಂದಿ ಬಿಡುಗಡೆಯಾಗಿದ್ದು, 167 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.