ಕರ್ನಾಟಕ

karnataka

ETV Bharat / state

3 ತಿಂಗಳಿಗೆ ಬಿಳಿಗಿರಿ ರಂಗನಿಗೆ ₹35 ಲಕ್ಷ ಕಾಣಿಕೆ: ಭಕ್ತರಿಂದ ಡಾಲರ್ ಕೂಡ ಅರ್ಪಣೆ - ಚಾಮರಾಜನಗರ

ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ಕಾರ್ಯ ನಡೆದಿದೆ.

ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟ
ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟ

By

Published : Jun 29, 2022, 10:09 PM IST

ಚಾಮರಾಜನಗರ: ಯಳಂದೂರು‌ ‌ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಿಳಿಗಿರಿ ರಂಗನಾಥ‌ಸ್ವಾಮಿ ಬೆಟ್ಟದ ದೇವಾಲಯ ಹುಂಡಿ ಎಣಿಕೆ ನಡೆದಿದೆ. 3 ತಿಂಗಳು 8 ದಿನದ ಬಳಿಕ ನಡೆದ ಹುಂಡಿ ಎಣಿಕೆಯಲ್ಲಿ 35,59,990 ರೂ. ಹಣ ಸಂಗ್ರಹವಾಗಿದ್ದು, 3 ಅಮೆರಿಕನ್ ಡಾಲರ್ ಅನ್ನೂ ಭಕ್ತರು ಅರ್ಪಿಸಿದ್ದಾರೆ.‌

ಈ ಬಾರಿ ಚಿನ್ನ ಮತ್ತು ಬೆಳ್ಳಿ ತೂಕ ಮಾಡಿಲ್ಲ ಎಂದು ಇಒ ಮೋಹನ್ ತಿಳಿಸಿದ್ದಾರೆ. ಬಿಳಿಗಿರಿರಂಗನ ಬೆಟ್ಟ ನವೀಕರಣಗೊಂಡ ಬಳಿಕ ಭಕ್ತರು, ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದ್ದು ವಾರಾಂತ್ಯದಲ್ಲಿ ಪ್ರಕೃತಿ ಚೆಲುವು ಕಣ್ತುಂಬಿಕೊಳ್ಳಲು ಜನ ಕಿಕ್ಕಿರಿದು ಸೇರುತ್ತಿದ್ದಾರೆ.

ಇದನ್ನೂ ಓದಿ:ಸುರಕ್ಷಿತ ಕ್ಷೇತ್ರ ಹುಡುಕುವ ಬದಲು ನಿವೃತ್ತಿ ಘೋಷಿಸಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್

ABOUT THE AUTHOR

...view details