ಕೊಳ್ಳೇಗಾಲ: ಗುಡಿಸಲೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಭಾರಿ ಪ್ರಮಾಣದ ಹಸಿ ಮಾಕಳಿ ಬೇರನ್ನು ಜಾಗೇರಿ ಬಳಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 300 ಕೆ.ಜಿ ಮಾಕಳಿ ಬೇರು ವಶಕ್ಕೆ: ಆರೋಪಿ ಪರಾರಿ - ಮಾಕಳಿ ಬೇರು
ಕೊಳ್ಳೇಗಾಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಾಕಳಿ ಬೇರಿನ ಅಕ್ರಮ ಸಂಗ್ರಹ ಹಾಗೂ ಮಾರಾಟ ಪ್ರಕರಣಗಳು ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಚರಣೆ ನಡೆಸಿ 300 ಕೆಜಿ ಬೇರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಕಳಿ ಬೇರು
ತಾಲೂಕಿನ ಜಾಗೇರಿ ಸಮೀಪದ ಆಲದಮರ ದೊಡ್ಡಿಯ ಗುಡಿಸಲೊಂದರಲ್ಲಿ ಮಣಿ ಎಂಬಾತ ಮಾಕಳಿ ಬೇರು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎನ್ನಲಾಗ್ತಿದೆ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಅರಣ್ಯ ಆರ್ಎಫ್ಒ ಪ್ರವೀಣ್ ತಂಡ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 300 ಕೆಜಿ ಹಸಿ ಮಾಕಳಿ ಬೇರನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಈ ಸಂಬಂಧ ಕೊಳ್ಳೇಗಾಲ ಬಫರ್ ವಲಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.