ಚಾಮರಾಜನಗರ: ಜಿಲ್ಲೆಯಲ್ಲಿಂದು ಹೊಸದಾಗಿ 30 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು 12 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯ ಸೋಂಕಿತರ ಸಂಖ್ಯೆ 2649 ಕ್ಕೆ ಏರಿಕೆಯಾಗಿದೆ.
ಚಾಮರಾಜನಗರ: 30 ಸೋಂಕಿತರು ಪತ್ತೆ, 12 ಮಂದಿ ಗುಣಮುಖ - ಚಾಮರಾಜನಗರ ಕೊರೊನಾ ವರದಿ
ರಾಜ್ಯ ಆರೋಗ್ಯ ಇಲಾಖೆ ಕೋವಿಡ್ ವರದಿ ಬಿಡುಗಡೆ ಮಾಡಿದ್ದು, ಚಾಮರಾಜನಗರಲ್ಲಿ ಇಂದು 30 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದ್ದು, 12 ಸೋಂಕಿತರು ಗುಣಮುಖರಾಗಿದ್ದಾರೆ.
![ಚಾಮರಾಜನಗರ: 30 ಸೋಂಕಿತರು ಪತ್ತೆ, 12 ಮಂದಿ ಗುಣಮುಖ 30 new corona patients found in chamarajangar](https://etvbharatimages.akamaized.net/etvbharat/prod-images/768-512-8702605-thumbnail-3x2-kdkd.jpg)
ಚಾಮರಾಜನಗರ
ಜಿಲ್ಲೆಯಲ್ಲಿ ಒಟ್ಟು 536 ಸಕ್ರಿಯ ಪ್ರಕರಣಗಳಿದ್ದು 13 ಮಂದಿ ಐಸಿಯುಗೆ ದಾಖಲಾಗಿದ್ದಾರೆ. 157 ಮಂದಿ ಹೋಂ ಐಸೋಲೇಷನ್ನಲ್ಲಿದ್ದು 360 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.
ಇಂದು ಪತ್ತೆಯಾದ ಸೋಂಕಿತರ ಪೈಕಿ 60 ವರ್ಷ ಮೇಲ್ಪಟ್ಟ 9 ಜನರಿದ್ದಾರೆ. ಅಲ್ಲದೆ ಗುಣಮುಖರಾದವರಲ್ಲಿ 72 ವರ್ಷದ ಇಬ್ಬರಿದ್ದಾರೆ.