ಕರ್ನಾಟಕ

karnataka

ETV Bharat / state

ಆಸ್ತಿ ವಿವಾದ: ಚಾಮರಾಜನಗರದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ.. ಆಕ್ರಂದನ - ಆಸ್ತಿ ವಿವಾದ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಬೇಡರಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

suicide
ಮೂವರು ಆತ್ಮಹತ್ಯೆ

By

Published : Jun 23, 2023, 11:27 AM IST

Updated : Jun 23, 2023, 2:23 PM IST

ಚಾಮರಾಜನಗರ : ಆಸ್ತಿ ವಿವಾದದಿಂದ ಕಂಗೆಟ್ಟು ಗಂಡ - ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಪತಿ ಮಹಾದೇವಸ್ವಾಮಿ (42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಮೃತ ದುರ್ದೈವಿಗಳು‌. ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ. ಡೆತ್​ನೋಟ್ ಸಹ ಬರೆದಿಟ್ಟಿದ್ದು, ಮೃತನ ಅಕ್ಕ - ತಂಗಿಯರ ಹೆಸರು ಉಲ್ಲೇಖಿಸಿ ಇವರಿಗೆಲ್ಲಾ ಶಿಕ್ಷೆ ಆಗಬೇಕು ಎಂದು ಕೋರಿಕೊಂಡಿದ್ದಾರೆ.

ಮಹಾದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು, ಸವಿತಾ ಟೈಲರಿಂಗ್ ಮಾಡುತ್ತಿದ್ದರಂತೆ. ಇವರಿಗೆ ಇಬ್ಬರು ಪುತ್ರಿಯರಿದ್ದು ಓರ್ವ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಾ ತಾತನ ಮನೆಯಲ್ಲಿದ್ದಾರೆ. ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು, ಅಪ್ಪ-ಅಮ್ಮನ ಜೊತೆ ಇದ್ದಳು‌. ಸದ್ಯಕ್ಕೆ ಮೂವರು ಸಾವಿಗೆ ಶರಣಾಗಿದ್ದು ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ.

ಮೇಲ್ನೋಟಕ್ಕೆ ಹೆಂಡತಿ ಮತ್ತು ಮಗಳು ಮೊದಲು ಸಾವಿಗೆ ಶರಣಾಗಿದ್ದು, ಬಳಿಕ ಮಾಹದೇವಸ್ವಾಮಿ ನೇಣಿಗೆ ಕೊರಳೊಡ್ಡಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾ ಎಸ್​ಪಿ ಪದ್ಮಿನಿ ಸಾಹು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ :ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ

ಮನೆ ಮಾಲೀಕರು ಆತ್ಮಹತ್ಯೆ : ಮನೆಯ ಬಾಡಿಗೆಗೆ ಇದ್ದ ಮಹಿಳೆಯ ಕಿರುಕುಳ ತಾಳಲಾರದೇ ಮನನೊಂದು ಮಾಲೀಕರೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ದಾಸರಕೊಪ್ಪಲಿಯಲ್ಲಿ ನಡೆದಿದೆ. ಮಗಳ ಸಾವಿನ ವಿಷಯ ತಿಳಿದು ಆಕೆಯ ತಾಯಿಗೆ ಹೃದಯಘಾತವಾಗಿದ್ದು, ಸಾವನ್ನಪ್ಪಿದ್ದಾರೆ. ಲಲಿತಮ್ಮ (55) ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಕೇಳಿದ ಲಲಿತಮ್ಮ ಅವರ ತಾಯಿ ಲಕ್ಷ್ಮಮ್ಮ(74) ಗೆ ಹೃದಯಾಘಾತವಾಗಿದ್ದು, ಅವರೂ ಕೂಡ ಸಾವನ್ನಪ್ಪಿದ್ದಾರೆ.

ಇದೇ ಜೂನ್​ 8 ರಂದು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿಯ ಉಪ್ಪರವಾಡಿ ಎಂಬಲ್ಲಿ ಪತಿಯೋರ್ವ ಕುಡಿದ ಅಮಲಿನಲ್ಲಿ ಮನೆಯಲ್ಲಿ ಮಲಗಿದ್ದ ಪತ್ನಿಯನ್ನೇ ಹತ್ಯೆ ಮಾಡಿ, ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದ. ಮೃತ ಮಹಿಳೆಯನ್ನು ಉಪ್ಪರವಾಡಿ ಗಲ್ಲಿಯ ಉಷಾ ಖೋತ (29). ಪತಿ ಧರೆಪ್ಪ ಖೋತ ಕೊಲೆ ಮಾಡಿದ ಆರೋಪಿ. ಉಷಾ ಮನೆಯ ಕೊಠಡಿಯಲ್ಲಿ ಮಲಗಿದ್ದಾಗ ಆಕೆಯ ಪತಿ ಧರೆಪ್ಪ ಖೋತಾ ಚಾಕುವಿನಿಂದ ಕತ್ತು ಇರಿದು ಹತ್ಯೆ ಮಾಡಿದ್ದ. ಬಳಿಕ, ತಾನು ಕೂಡ ಅದೇ ಕೊಠಡಿಯಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿದ್ದ.

ಇದನ್ನೂ ಓದಿ :Belagavi Crime: ಕುಡಿತದಿಂದ ಕೌಟುಂಬಿಕ ಕಲಹ.. ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಜೂನ್​ 21 ರಂದು ಡೆತ್​ ನೋಟ್​ ಬರೆದು ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಪತಿ ಹಾಗೂ ಮನೆಯವರ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ :ಕೋಲಾರ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

Last Updated : Jun 23, 2023, 2:23 PM IST

ABOUT THE AUTHOR

...view details