ಚಾಮರಾಜನಗರ:ಪಿಕ್ ಅಪ್ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಜೆ.ವಿಲೇಜ್ ಸಮೀಪ ನಡೆದಿದೆ.
ಮದುವೆ ಮನೆಯಿಂದ ಮಸಣಕ್ಕೆ... ಪಿಕ್ಅಪ್ ವಾಹನ ಪಲ್ಟಿಯಾಗಿ ಮೂವರ ಸಾವು, 20 ಮಂದಿಗೆ ಗಾಯ..! - Chamrajnagar accident news
ಪಿಕ್ ಅಪ್ ವಾಹನ ಪಲ್ಟಿಯಾಗಿ ಮದುವೆ ಮನೆಯಿಂದ ಮರಳುತ್ತಿದ್ದ ಮೂವರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ 20 ಮಂದಿಗೆ ಗಾಯಗಳಾಗಿವೆ.
![ಮದುವೆ ಮನೆಯಿಂದ ಮಸಣಕ್ಕೆ... ಪಿಕ್ಅಪ್ ವಾಹನ ಪಲ್ಟಿಯಾಗಿ ಮೂವರ ಸಾವು, 20 ಮಂದಿಗೆ ಗಾಯ..! van overturn](https://etvbharatimages.akamaized.net/etvbharat/prod-images/768-512-7624413-thumbnail-3x2-jayyjpg.jpg)
ಹನೂರು ತಾಲೂಕಿನ ಹುಸಣೇಪಾಳ್ಯ ಗ್ರಾಮದ ನಾಗರಾಜು(60), ವರ್ಯ( 60) ಚಿಕ್ಕಸಿದ್ದಮ್ಮ (55) ಮೃತರು. ಕೊಳ್ಳೇಗಾಲದ ಮಧುವನಹಳ್ಳಿಯಲ್ಲಿನ ಮದುವೆಗೆ ತೆರಳಿ ಹಿಂತಿರುಗುವಾಗ ನಿಯಂತ್ರಣ ತಪ್ಪಿ ಪಿಕ್ ಅಪ್ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ವಾಹನದಲ್ಲಿ 25 ಕ್ಕೂ ಹೆಚ್ಚು ಮಂದಿ ಇದ್ದರು ಎಂದು ತಿಳಿದುಬಂದಿದ್ದು, 20 ಜನರು ಗಾಯಗೊಂಡು ಪಿ.ಜಿ.ಪಾಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಲಕ ಮೃತ ನಾಗರಾಜನ ಅಳಿಯನೇ ಆಗಿದ್ದು, ಘಟನೆ ನಡೆಯುತ್ತಿದ್ದಂತೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.