ಕರ್ನಾಟಕ

karnataka

ETV Bharat / state

ಚಾಮರಾಜನಗರದಿಂದ ತಮಿಳುನಾಡಿಗೆ ಗಾಂಜಾ ಸಾಗಾಟ: ಮೂವರು ಅರೆಸ್ಟ್‌ - chamarajangara marijuana trafficking case

ಗಾಂಜಾ ಸಾಗಣೆ ಪಕರಣದಡಿ ಮೂವರನ್ನು ಬಂಧಿಸಲಾಗಿದೆ. ರಾಮಾಪುರ ಪೊಲೀಸರು 1.75 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

chamarajangara  marijuana trafficking case
ಚಾಮರಾಜನಗರ ಗಾಂಜಾ ಸಾಗಾಟ ಪ್ರಕರಣ

By

Published : Oct 26, 2021, 12:12 PM IST

ಚಾಮರಾಜನಗರ: ತಮಿಳುನಾಡಿಗೆ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರನ್ನು ಹನೂರು ತಾಲೂಕಿನ‌ ರಾಮಾಪುರದಲ್ಲಿ ಬಂಧಿಸಲಾಗಿದೆ.

ರಾಮಾಪುರ ಗ್ರಾಮದ ಶ್ರೀನಿವಾಸ್, ಕೌದಳ್ಳಿ ಗ್ರಾಮದ ರಘುವರನ್, ಕೆಂಪಯ್ಯನಹಟ್ಟಿ ಗ್ರಾಮದ ಸಂದೀಪ್ ಬಂಧಿತರು‌. ಗಾಂಜಾ ಸಾಗಣೆ ಕುರಿತು ಮಾಹಿತಿ ಪಡೆದು, ರಾಮಾಪುರದ ಕೆಇಬಿ ಬಳಿ ದ್ವಿಚಕ್ರ ವಾಹನ ತಡೆದು ತಪಾಸಣೆ ಮಾಡಿದಾಗ ಈ ಮೂವರು 2.5 ಕೆಜಿ ಒಣ ಗಾಂಜಾವನ್ನು ಕೊಂಡೊಯ್ಯುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ:ಹೆಚ್​ಡಿಕೆಯನ್ನು ಸಾಕಿದ್ದು ನಾನೇ.. ಅಲ್ಪಸಂಖ್ಯಾತರನ್ನು ಬಲಿ ಕೊಡುವುದೇ ಕುಮಾರಸ್ವಾಮಿ ಕೆಲಸ: ಜಮೀರ್

ರಾಮಾಪುರ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 1.75 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details