ಕರ್ನಾಟಕ

karnataka

ETV Bharat / state

ಜಿಂಕೆ ಬೇಟೆಯಾಡುತ್ತಿದ್ದ 3 ಮಂದಿ ಅಂದರ್​​.. ಉಳಿದ 7 ಮಂದಿಗೆ ಪೊಲೀಸರ ಬಲೆ.. - ಜಿಂಕೆ ಬೇಟೆಯಾಡುತ್ತಿದ್ದ ಅರೆಸ್ಟ್

ಪಾರ್ವತಿ ಬೆಟ್ಟದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದು, ಪರಾರಿಯಾಗಿರುವ 7 ಮಂದಿಯ ವಶಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

3 are arrested who were hunting deer
ಜಿಂಕೆ ಬೇಟೆಯಾಡುತ್ತಿದ್ದ 3 ಮಂದಿ ಅಂದರ್​​.....ಉಳಿದ 7 ಮಂದಿಗೆ ಪೊಲೀಸರ ಬಲೆ

By

Published : Apr 29, 2020, 10:40 AM IST

ಗುಂಡ್ಲುಪೇಟೆ :ಬಫರ್‌ ಝೋನ್‌ ವಲಯದ ಪಾರ್ವತಿ ಬೆಟ್ಟದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ನಿನ್ನೆ ಬಂಧಿಸಿದ್ದಾರೆ.

ತಾಲೂಕಿನ ಅಣ್ಣೂರುಕೇರಿ ಗ್ರಾಮದ ಮಹೇಶ್‌(29),ಮಹೇಶ್( 30), ಮೂಖಹಳ್ಳಿ ಕಾಲೋನಿ ಶಿವಕುಮಾರ್ (30) ಬಂಧಿತ ಆರೋಪಿಗಳು. ಕಂದೆಗಾಲದ ಬೆಟ್ಟದಲ್ಲಿ ಸೋಮವಾರ ರಾತ್ರಿ ಸಮಯದಲ್ಲಿ ಟಾರ್ಚ್ ಲೈಟ್ ಉರಿಯುತ್ತಿದೆ ಎಂದು ಇಲಾಖೆಗೆ ಮಾಹಿತಿ ಬಂದಾಗ ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ನವೀನ್‌ಕುಮಾರ್ ಮತ್ತು ಗುಂಡ್ಲುಪೇಟೆ ಬಫರ್‌ ಝೋನ್‌ ವಲಯದ ವಲಯಾರಣ್ಯಾಧಿಕಾರಿ ಡಾ.ಲೋಕೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದರು. ಬೇಟೆಯಲ್ಲಿ ಭಾಗಿಯಾಗಿದ್ದ ಏಳು ಮಂದಿ ತಪ್ಪಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳಿಂದ ಒಂದು ನಾಡ ಬಂದೂಕು, ಸಿಡಿಮದ್ದುಗಳು, ಬ್ಯಾಟರಿ ಹಾಗೂ ಇತರೆ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್​​ಟಿಪಿಎಫ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜಿಂಕೆ ಬೇಟೆಯಾಡುತ್ತಿದ್ದವರು ಅರೆಸ್ಟ್..

ದೊಡ್ಡ ಜಾಲದ ಶಂಕೆ :ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಆದಿವಾಸಿ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ಮುದ್ದಯ ಅವರ ಪುತ್ರ ಶಾಮಿಲಾಗಿದ್ದಾನೆ. ಇದರಿಂದಾಗಿ ಜಿಂಕೆ ಮಾಂಸ ಮಾರಾಟ ಜಾಲ ದೊಡ್ಡದಿದೆ. ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ತನಿಖೆ ಮಾಡಿ ಜಾಲವನ್ನು ಪತ್ತೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿದ್ದಾರೆ.

ಎಸಿಎಫ್ ಪರಮೇಶ್ ಮಾತನಾಡಿ, ಎಸ್​​ಟಿಪಿಎಫ್ ಸಿಬ್ಬಂದಿ ಸಹಕಾರದಿಂದ ಈ ಪ್ರಕರಣ ಪತ್ತೆ ಮಾಡಲು ಸಾಧ್ಯವಾಯಿತು. ಜಿಂಕೆ ಮತ್ತು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮಹಾರಾಷ್ಟ್ರ ಕಂಟ್ರಿಮೇಡ್ ಗನ್ ಮತ್ತು ನಾಡಬಂದೂಕುಗಳನ್ನು ಬಳಸಲಾಗಿದೆ. ಆರೋಪಿಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಸಹ ಮಾಹಿತಿ ಇದೆ. ಗನ್​ಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಪರಾರಿಯಾಗಿರುವ ಆರೋಪಗಳನ್ನು ಪತ್ತೆ ಹಚ್ಚಿ ಮಾಂಸವನ್ನು ಯಾರು ಕೊಂಡುಕೊಳ್ಳುತ್ತಿದ್ದಾರೆ, ಎಲ್ಲಿಗೆ ಮಾರಾಟ ಮಾಡಲಾಗುತ್ತದೆ ಎಂಬುದನ್ನು ತನಿಖೆ ಮಾಡಲಾಗುತ್ತದೆ ಎಂದು ತಿಳಿಸಿದರು. ಅಲ್ಲದೇ ಒಂದು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಬೇಟೆಯ ಪ್ರಕರಣಗಳಾಗಿವೆ ಎಂದು ತಿಳಿಸಿದರು.

ABOUT THE AUTHOR

...view details