ಕರ್ನಾಟಕ

karnataka

ETV Bharat / state

ಚಾಮರಾಜನಗರದಲ್ಲಿ 260 ಕೋವಿಡ್ ಕೇಸ್​: ಸೋಂಕಿತ ವೃದ್ಧ ಸಾವು!! - corona cases increasing in chamrajnagar

ಚಾಮರಾಜನಗರದಲ್ಲಿ ಸೋಂಕಿತರ ಸಂಖ್ಯೆ ಸೋಮವಾರ 200 ದಾಟಿದ್ದು, ಬರೋಬ್ಬರಿ 26 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹಾಗೂ 119 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ.

chamrajnagar
chamrajnagar

By

Published : Apr 26, 2021, 10:36 PM IST

ಚಾಮರಾಜನಗರ: ಕೊರೊನಾ ಎರಡನೇ ಅಲೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ಸತತ ನಾಲ್ಕನೇ ದಿನವು 200ರ ಮೇಲೆ ಹೊಸ ಕೇಸ್ ಪತ್ತೆಯಾಗಿದೆ. ಸೋಮವಾರ ಬರೋಬ್ಬರಿ 260 ಮಂದಿಗೆ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 1,632ಕ್ಕೆ ಏರಿಕೆಯಾಗಿದೆ.

ಸೋಮವಾರ 119 ಮಂದಿ ಗುಣಮುಖರಾಗಿದ್ದಾರೆ. 43 ಮಂದಿ ಐಸಿಯುನಲ್ಲಿದ್ದು 1,263 ಮಂದಿ ಹೋಂ ಐಸೋಲೇಷನ್​ನಲ್ಲಿದ್ದಾರೆ. 3,380 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಸೋಂಕಿತ ವೃದ್ಧ ಸಾವು:

ಕೊಳ್ಳೇಗಾಲ ತಾಲೂಕಿನ ಲಿಂಗನಪುರ ಗ್ರಾಮದ 75 ವರ್ಷದ ವೃದ್ಧ ಕಳೆದ 20 ರಂದು ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ 25 ರಂದು ಮೃತಪಟ್ಟಿದ್ದಾರೆ. ‌ಮೃತರ ಸಂಖ್ಯೆ 126 ಕ್ಕೆ ಏರಿಕೆಯಾಗಿದೆ. ‌

ABOUT THE AUTHOR

...view details